×
Ad

ಯೋಜನೆಯೇ ಇಲ್ಲದ ಲಾಕ್ ಡೌನ್ ಹೇರಿದ್ದರಿಂದ ಕೊರೋನ ವಿರುದ್ಧದ ಯುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ: ರಾಹುಲ್ ಗಾಂಧಿ

Update: 2020-12-19 20:47 IST

ಹೊಸದಿಲ್ಲಿ, ಡಿ. 19: ಕಟ್ಟು ನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಿದ ಹೊರತಾಗಿಯೂ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ಅವರು ಮಾರ್ಚ್‌ನಲ್ಲಿ ಹೇಳಿದಂತೆ 21 ದಿನಗಳಲ್ಲಿ ಕೊರೋನಾದ ವಿರುದ್ಧ ಹೋರಾಟದಲ್ಲಿ ಜಯ ಗಳಿಸಲು ಕೇಂದ್ರ ಸರಕಾರ ವಿಫಲವಾಯಿತು ಎಂದು ಅವರು ಹೇಳಿದ್ದಾರೆ.

 ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಕುರಿತು ತೀವ್ರ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 1.5 ಲಕ್ಷ ಸಾವಿನೊಂದಿಗೆ 1 ಕೋಟಿ ಕೊರೋನ ಸೋಂಕು ! ಯೋಜನಾ ರಹಿತ ಲಾಕ್‌ಡೌನ್‌ನಿಂದ ಪ್ರಧಾನಿ ಅವರು ಹೇಳಿದಂತೆ 21 ದಿನಗಳಲ್ಲಿ ಕೊರೋನ ವಿರುದ್ಧದ ಯುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಖಂಡಿತವಾಗಿ ದೇಶದ ಲಕ್ಷಾಂತರ ಜನರ ಜೀವವನ್ನು ನಾಶ ಮಾಡಿತು ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News