×
Ad

ಪಾಲಕ್ಕಾಡ್: ಮುಂದುವರಿದ ಆರೆಸ್ಸೆಸ್- ಸಿಪಿಎಂ ಘರ್ಷಣೆ

Update: 2020-12-19 21:01 IST

ಪಾಲಕ್ಕಾಡ್, ಡಿ. 19: ಪಾಲಕ್ಕಾಡ್ ನಗರ ಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಾಗೂ ಬಿಜೆಪಿ ಕಾರ್ಯಕರ್ತರು ನಗರ ಸಭೆ ಕಟ್ಟಡದ ಟೆರೇಸ್‌ನಲ್ಲಿ ಬೃಹತ್ ಬ್ಯಾನ್‌ರನ್ನು ಹಾರಿಸಿದ ಘಟನೆಯ ಬಳಿಕ ಪಾಲಕ್ಕಾಡ್‌ನಲ್ಲಿ ರಾಜಕೀಯ ಪಕ್ಷಗಳ ನಡುವಿನ ಘರ್ಷಣೆ ಮುಂದುವರಿದಿದೆ.

ರಾಜಕೀಯ ಮೆರವಣಿಗೆಯಲ್ಲಿ ದಾಂಧಲೆ ನಡೆಸಿದ ಹಾಗೂ ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಶುಕ್ರವಾರ 11 ಮಂದಿ ಸಿಪಿಎಂ ಕಾರ್ಯಕರ್ತರನ್ನು ಬಂಧಿಸಲಾಗಿದೆ.

‘‘ಇಲ್ಲಿನ ದೇವಾಲಯದ ಹೊರಗೆ ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರ ಗುಂಪೊಂದು ಇತ್ತು. ಸಿಪಿಎಂ ಕಾರ್ಯಕರ್ತರು ಈ ಪ್ರದೇಶದ ಮೂಲಕ ಹಾದು ಹೋಗಿದ್ದರು. ಈ ಸಂದರ್ಭ ಅವರ ನಡುವೆ ವಾಗ್ವಾದ ನಡೆಯಿತು. ಇದು ರಾಜಕೀಯ ಪ್ರೇರಿತ. ಧಾರ್ಮಿಕ ಪ್ರೇರಿತ ಅಲ್ಲ’’ ಎಂದು ಪಾಲಕ್ಕಾಡ್ ಜಿಲ್ಲಾ ಪೊಲೀಸ್ ವರಿಷ್ಠ ಸುಜಿತ್ ದಾಸ್ ಎಸ್. ತಿಳಿಸಿದ್ದಾರೆ.

 ಎರಡು ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ ಹಾಗೂ ಸಾಮರಸ್ಯ ನಿರ್ವಹಣೆಯಲ್ಲಿ ಪೂರ್ವಾಗ್ರಹಪೀಡಿತಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ದಾಸ್ ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ನಗರಸಭೆಯ ಕಟ್ಟಡದ ಟೆರೇಸ್ ಮೇಲೆ ಬೃಹತ್ ಬ್ಯಾನರ್ ಹಾರಿಸಿರುವುದಕ್ಕೆ ಪ್ರತಿಯಾಗಿ ಸಿಪಿಎಂ ಕಾರ್ಯಕರ್ತರು ಅದೇ ದಿನ ಟೆರೇಸ್ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News