ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ವಿತರಣೆ
Update: 2020-12-19 22:27 IST
ಮಂಗಳೂರು, ಡಿ.19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ಪ್ರಸ್ತುತ ಸಾಲಿನಲ್ಲಿ ವಿಕಲಚೇತನರ ರಿಯಾಯಿತಿ ದರದ ಬಸ್‌ಪಾಸ್‌ಗಳನ್ನು ವಿತರಣೆ/ ನವೀಕರಣ ಮಾಡಲು ಡಿ.28ರವರೆಗೆ ಮಾನ್ಯ ಮಾಡಲಾಗುವುದು.
ಡಿ.26ರಿಂದ ವಿಕಲಚೇತನರ ಪಾಸ್‌ಗಳ ವಿತರಣೆ/ ನವೀಕರಣವನ್ನು ಪ್ರಾರಂಭಿಸಲಾಗುವುದು. ಫಲಾನುಭವಿಗಳು 660 ರೂ.- ನಗದು ರೂಪದಲ್ಲಿ ಪಾವತಿಸಿ ಪ್ರಸ್ತುತ ಸಾಲಿಗೆ ಪಾಸ್ ಪಡೆಯಬಹುದಿ. ನವೀಕರಣ/ಹೊಸ ಪಾಸು ಪಡೆಯುವ ಫಲನುಭವಿಗಳೆಲ್ಲರೂ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್ https://serviceonlinegov.in/karnataka/ನಲ್ಲಿ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗ (ದೂ.ಸಂ: 08251-235421)ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.