×
Ad

ಬರ್ಕೆ ಫ್ರೆಂಡ್ಸ್‌ನ 28ನೇ ವಾರ್ಷಿಕೋತ್ಸವ

Update: 2020-12-19 22:45 IST

ಮಂಗಳೂರು, ಡಿ.19: ನಗರದ ಮಣ್ಣಗುಡ್ಡೆ ಗುರ್ಜಿ 151ನೇ ದೀಪೋತ್ಸವದ ಸಂದರ್ಭ ನಡೆಯುವ ಬರ್ಕೆ ಫ್ರೆಂಡ್ಸ್‌ನ 28ನೇ ವಾರ್ಷಿಕ ಕಾರ್ಯಕ್ರಮವು ತುಳುಭವನದಲ್ಲಿ ನಡೆಯಿತು.

ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಆ್ಯಂಬುಲೆನ್ಸ್ ಚಾಲಕ ಹನೀಫ್ ಬೆಳ್ತಂಗಡಿ, ಕೊರಗಜ್ಜನ ಭಕ್ತಿಯ ಹಾಡು ಹಾಡಿದ ಬಾಲಕ ಕಾರ್ತಿಕ್, ಕೂಲಿ ಕೆಲಸವನ್ನು ಮಾಡಿ ಉನ್ನತ ವ್ಯಾಸಂಗ ಮಾಡುತ್ತಿರುವ ಬುಡ್ದನ ಗೌಡ ಚಂದಪ್ಪಅಕ್ಕರಗಲ್ಲ, ಪಿಯುಸಿ ಮತ್ತು 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಪೃಥ್ವಿ ರೈ, ಪ್ರಜ್ಞ್ಞಾ ಡಿ. ರೈ, ಅನಿಶಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬರ್ಕೆ ಫ್ರೆಂಡ್ಸ್‌ನ ಸ್ಥಾಪಕ ಯಜ್ಞೇಶ್ವರ್ ಬರ್ಕೆ, ಗೌರವಾಧ್ಯಕ್ಷ ಸುಚೀಂದ್ರ ಅಮೀನ್, ಸಂತೋಷ್ ಕುಮಾರ್ ಶೆಟ್ಟಿ, ಕಾರ್ಪೊರೇಟರ್ ಜಯಲಕ್ಷ್ಮಿ ಶೆಟ್ಟಿ, ಗಣೇಶ್ ಉರ್ವಾ, ವಾಸುದೇವ ಕಾಮತ್, ಮಾಧವ ಕಾಮತ್, ತುಳು ಅಕಾಡಮಿಯ ಸದಸ್ಯರಾದ ಕಡಬ ದಿನೇಶ್ ರೈ, ಚೇತನ್ ಪೂಜಾರಿ, ಲೀಲಾಕ್ಷ ಕರ್ಕೇರ, ಅಜಿತ್ ಮುಂಬೈ, ಲೋಕನಾಥ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News