×
Ad

ನೀರವ್ ಮೋದಿ ಸಹೋದರನ ವಿರುದ್ಧ ಅಮೆರಿಕದಲ್ಲಿ ವಂಚನೆ ಕೇಸ್

Update: 2020-12-20 13:37 IST

 ಹೊಸದಿಲ್ಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್(ಪಿಎನ್‌ಬಿ) ವಂಚನೆ ಆರೋಪಿ ಹಾಗೂ ವಜ್ರ ವ್ಯಾಪಾರಿ ನೀರವ್ ಮೋದಿಯ ಸಹೋದರ ಹಾಗೂ ಇದೇ ಪ್ರಕರಣದಲ್ಲಿ ಸಿಬಿಐಗೆ ಬೇಕಾಗಿರುವ ನೆಹಾಲ್ ಮೋದಿ ವಿರುದ್ಧ ಅಮೆರಿಕದ ಕಂಪೆನಿಯೊಂದಕ್ಕೆ ವಂಚಿಸಿ 19 ಕೋಟಿ (2.6 ದಶಲಕ್ಷ ಡಾಲರ್) ವೌಲ್ಯದ ವಜ್ರಗಳನ್ನು ಪಡೆದ ಆರೋಪವನ್ನು ಹೊರಿಸಲಾಗಿದೆ.

  41 ವರ್ಷದ ನೆಹಾಲ್ ಮೋದಿ ಎಲ್‌ಎಲ್‌ಡಿ ಡೈಮಂಡ್ಸ್ ಎಂಬ ಕಂಪೆನಿಗೆ ಆಗಸ್ಟ್‌ವರೆಗಿನ ಅವಧಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ 2.6 ದಶಲಕ್ಷ ಡಾಲರ್ ವೌಲ್ಯದ ರತ್ನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

 ನೆಹಾಲ್ ವಿರುದ್ಧ ಇಲ್ಲಿನ ಸುಪ್ರೀಂಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮ್ಯಾನ್‌ಹಟ್ಟನ್ ಜಿಲ್ಲಾ ಅಟಾರ್ನಿ ವ್ಯಾನ್ಸಿ ಜ್ಯೂನಿಯರ್ ಡಿಸೆಂಬರ್ 18ರಂದು ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಂಟ್ವಾರ್ಪ್ ನಿವಾಸಿಯಾಗಿರುವ ನೆಹಾಲ್ ,ನೀರವ್ ಮೋದಿ ಸಹೋದರನಾಗಿದ್ದು, ಪಿಎನ್‌ಬಿ ವಂಚನೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಿಬಿಐಗೆ ಬೇಕಾಗಿದ್ದಾನೆೆ. ಇದರಲ್ಲಿ ಈತ 27ನೇ ಆರೋಪಿಯಾಗಿದ್ದಾನೆ. ದುಬೈನಲ್ಲಿ ಅಪರಾಧದ ಜಾಡುಗಳನ್ನು ಮುಚ್ಚಿಹಾಕಲು ಸಾಕ್ಷಗಳನ್ನು ನಾಶಪಡಿಸಿದ ಆರೋಪ ನೆಹಾಲ್ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News