ವಕ್ಫ್ ಪ್ರಕರಣ ಶೀಘ್ರ ವಿಲೆವಾರಿಗೆ ಉಪಲೋಕಾಯುಕ್ತರಿಗೆ ಮನವಿ
Update: 2020-12-20 19:01 IST
ಉಡುಪಿ, ಡಿ.20: ವಕ್ಫ್ ಸಂಸ್ಥೆಗಳಿಗೆ ಸಂಬಂಧಿಸಿದ ಕಂದಾಯ ಇಲಾಖೆ ಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ವಿಲೆವಾರಿ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯ್ದಿನಬ್ಬ ಶನಿವಾರ ಉಡುಪಿಯಲ್ಲಿ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಕಾರ್ಕಳ, ಉಡುಪಿ, ಕುಂದಾಪುರ, ಕಾಪು ತಾಲೂಕುಗಳಲ್ಲಿ ಕರ್ನಾಟಕ ವಕ್ಫ್ ಮಂಡಳಿಯ ಹೆಸರಿಗೆ ಗಜೆಟ್ ನೋಟಿಫಿಕೇಶನ್ ಆಗಿರುವ ಹಲವಾರು ವಕ್ಫ್ ಆಸ್ತಿಗಳು ಸರ್ವೆಗೆ ತಾಲೂಕು ಕಚೇರಿಗಳಲ್ಲಿ ಬಾಕಿಯಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪಹಣಿಯ ಕಲಂ 9-ಹಾಗೂ 11ರಲ್ಲಿ ವಕ್ಫ್ ಸಂಸ್ಥೆಯ ಹೆಸರು ದಾಖಲಿಸುವ ಸಂಬಂಧದ ಕಡತಗಳು ತಾಲೂಕು ಕಚೇರಿ ಗಳಲ್ಲಿ ದೀರ್ಘ ಕಾಲದಿಂದ ವಿಲೆವಾರಿಗೆ ಬಾಕಿ ಇದ್ದು ಇದರ ಕುರಿತು ಕೂಡಲೇ ಕ್ರಮ ಕೈಗೊಳ್ಳವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.