×
Ad

ಜಿಎಸ್‌ಬಿ ಸಮಾಜದವರಿಗೆ ಕೋವಿಡ್ ಪರಿಹಾರ ಕಿಟ್ ವಿತರಣೆ

Update: 2020-12-20 19:04 IST

ಉಡುಪಿ, ಡಿ.20: ಉಡುಪಿ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ, ಜಿಎಸ್‌ಬಿ ಸಭಾ ಕೋಡಿಕಲ್ ಮಂಗಳೂರು, ಅಕ್ಷಯ ಪಾತ್ರ ಫೌಂಡೇಶನ್ ಮಂಗಳೂರು, ಇಸ್ಕಾನ್ ಫೌಂಡೇಶನ್ ಇವುಗಳ ಸಹಯೋಗದಲ್ಲಿ ಕೋವಿಡ್ ಪರಿಹಾರ ಕಿಟ್ ವಿತರಣೆ ಕಾರ್ಯಕ್ರಮವು ರವಿವಾರ ದೇವಸ್ಥಾನದ ಭುವನೇಂದ್ರ ಮಂಟಪದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಇಸ್ಕಾನ್ ಕೋವಿಡ್ ಪರಿಹಾರ ಕಾರ್ಯ ಸಂಯೋಜಕ ಶ್ರೀಸನಂದನದಾಸ್ ಸ್ವಾಮೀಜಿ ಮಾತನಾಡಿ, ಅಕ್ಷಯ ಪಾತ್ರೆ ಯೋಜನೆ ಯಲ್ಲಿ ಶ್ರೀಕೃಷ್ಣ ಪ್ರಸಾದ ರೂಪದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು ಹನ್ನೆರೆಡು ಲಕ್ಷ ಆರ್ಥಿಕವಾಗಿ ಹಿಂದುಳಿದ ಜನರಿಗೆ ಸುಮಾರು ಹತ್ತು ಕೋಟಿ ಮೌಲ್ಯದ ರೆೀಷನ್ ಕಿಟ್ ವಿತರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಪರಿಸರದ ಆರ್ಥಿಕವಾಗಿ ಹಿಂದುಳಿದ ಜಿಎಸ್‌ಬಿ ಸಮಾಜದ 125 ಜನರಿಗೆ ದಿನ ಉಪಯೋಗಿ ವಸ್ತುಗಳ ಕಿಟ್ ವಿತರಿಸಲಾಯಿತು. ವೇದಿಕೆಯಲ್ಲಿ ಅಕ್ಷಯ ಪತ್ರೆ ಫೌಂಡೇಶನ್ ಅಧ್ಯಕ್ಷ ಗಣೇಶ್ ಕಾಮತ್, ಕಾರ್ಯದರ್ಶಿ ರಾಮಾನಂದ ಶೆಣೈ, ಬಸ್ತಿಕಾರ್ ಪುರುಷೋತ್ತಮ ಶೆಣೈ, ನರಸಿಂಹ ಪ್ರಭು ಕುಂಬ್ಳೆ, ಸಂತೋಷ್ ಪೈ, ಮಾಧವ ಪ್ರಭು, ವಾಮನ್ ನಾಯಕ್, ಇಂದಿರಾ ಕಾಮತ್ ಉಪಸ್ಥಿತರಿ ದ್ದರು. ದೇವಳದ ಆಡಳಿತ ಮಂಡಳಿ ಸದಸ್ಯ ವಸಂತ್ ಕಿಣಿ ಸ್ವಾಗತಿಸಿದರು. ಭವ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News