ಅಗಲಿದ ಹಿರಿಯರಿಗೆ ನುಡಿನಮನ
Update: 2020-12-20 19:06 IST
ಉಡುಪಿ, ಡಿ.20: ಉಡುಪಿ ತುಳು ಶಿವಳ್ಳಿ ಮಾದ್ವ ಬ್ರಾಹ್ಮಣ ವತಿಯಿಂದ ಇತ್ತೀಚಿಗೆ ನಿಧನರದ ಹಿರಿಯ ಚೇತಗಳಾದ ಬನ್ನಂಜೆ ಗೋವಿಂದಾ ಚಾರ್ಯ, ಉದ್ಯಾವರ ಮಾಧವ ಆಚಾರ್ಯ, ಕೆ.ದಾಮೋದರ ಐತಾಳ್ ಅವರಿಗೆ ಕಡಿ ಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಶನಿವಾರ ನುಡಿ ನಮನ ಸಲ್ಲಿಸಲಾಯಿತು.
ಬಾಲಾಜಿ ರಾಘವೇಂದ್ರ ಆಚಾರ್ಯ, ರಂಜನ್ ಕಲ್ಕೂರಾ, ಪಾಡಿಗಾರು ವಿಷ್ಣು ಭಟ್, ಶ್ರೀನಿವಾಸ ಉಪಾಧ್ಯ ನುಡಿ ನಮನ ಸಲ್ಲಿಸಿದರು. ಮಾಮ ಅಧ್ಯಕ್ಷ ಅರವಿಂದ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಬೈಲೂರು ಜಯರಾಮ ಆಚಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ವಾದಿರಾಜ ಆಚಾರ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯ ದರ್ಶಿ ರವಿ ಪ್ರಕಾಶ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು.