ಮಂಗಳೂರಿನ ರೈಲು ನಿಲ್ದಾಣ, ಪ್ರಮುಖ ರಸ್ತೆಗೆ ಗಣ್ಯರ ಹೆಸರಿಡಲು ಮನವಿ
Update: 2020-12-20 19:07 IST
ಮಂಗಳೂರು, ಡಿ.20: ನಗರದ ರೈಲು ನಿಲ್ದಾಣ, ಪ್ರಮುಖ ರಸ್ತೆ, ವೃತ್ತಕ್ಕೆ ಗಣ್ಯರ ಹೆಸರಿಡಬೇಕು ಎಂದು ದ.ಕ.ಜಿಲ್ಲಾ ಕಾನೂನು ವೇದಿಕೆಯು ಮೇಯರ್‌ಗೆ ಮನವಿ ಸಲ್ಲಿಸಿದೆ.
ನಗರದ ಕರಂಗಲ್ಪಾಡಿಯಿಂದ ಕೋರ್ಟ್ ಮುಖಾಂತರ ಕೆಎಸ್ ರಾವ್ ರಸ್ತೆಯನ್ನು ಸಂಪರ್ಕಿಸುವ ರಸ್ತೆಗೆ ದಿ. ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆಯ ಹೆಸರಿಡಬೇಕು. ಅಲ್ಲದೆ ನಗರದ ರೈಲ್ವೆ ನಿಲ್ದಾಣ ಅಥವಾ ಬಿಜೈ ರಸ್ತೆಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ರಸ್ತೆ ಎಂದು ನಾಮಕರಣ ಮಾಡಬೇಕು ಎಂದು ವೇದಿಕೆ ಆಗ್ರಹಿಸಿದೆ.
ವೇದಿಕೆಯ ಅಧ್ಯಕ್ಷ ಎಸ್‌ಪಿ ಚೆಂಗಪ್ಪ, ಪ್ರಧಾನ ಕಾರ್ಯದರ್ಶಿ ಉದನೇಶ್ವರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿರೇಂದ್ರ ಸಿದ್ದಕಟ್ಟೆ, ಮಂಗಳೂರು ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಸಮಿತಿಯ ಸದಸ್ಯರಾದ ಪ್ರಮೋದ್ ಕುಮಾರ್ ನಿಯೋಗದಲ್ಲಿದ್ದರು.