×
Ad

ಪ್ರೊ. ಇಬ್ರಾಹಿಂ ಬ್ಯಾರಿಯವರ ಪುಸ್ತಕ ಲೋಕಾರ್ಪಣೆ

Update: 2020-12-20 22:28 IST

ಮಂಗಳೂರು, ಡಿ.20: ಪ್ರೊ.ಇಬ್ರಾಹಿಂ ಬ್ಯಾರಿ ಅವರ ‘ಬ್ಯುಸಿನೆಸ್ ಸ್ಟಾಟಿಸ್ಟಿಕ್ಸ್’, ‘ಕ್ವಾಂಟಿಟೇಟಿವ್ ಟೆಕ್ನಿಕ್ಸ್’ ಪುಸ್ತಕಗಳನ್ನು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಲೋಕಾರ್ಪಣೆಗೊಳಿಸಿದರು.

ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಪುಸ್ತಕ ಬರೆಯುವ ಸಾಮರ್ಥ್ಯ, ಪ್ರಬುದ್ಧತೆ, ಇಚ್ಚಾಶಕ್ತಿ, ಅವಕಾಶವೂ ಇರಬೇಕು. ಈ ಎಲ್ಲ ಅಂಶಗಳಿಗೂ ಇಬ್ರಾಹೀಂ ಬ್ಯಾರಿಯವರು ಸಮರ್ಥರು. ಸಹೃದಯ ವ್ಯಕ್ತಿತ್ವ ಹೊಂದಿರುವ ಬ್ಯಾರಿ ಅದ್ಭುತ ಬರಹಗಾರರು. ಬಿಡುಗಡೆಯಾಗಿರುವ ಕೃತಿಗಳು ಕೊರೋನ ಲಾಕ್‌ಡೌನ್‌ನಲ್ಲಿ ಮೂಡಿಬಂದಿರುವುದು ವಿಶೇಷ ಎಂದರು.

ಪುಸ್ತಕ ರಚನೆಕಾರ ಪ್ರೊ.ಇಬ್ರಾಹೀಂ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ಎಸ್.ಬಿ. ಅಪ್ಪಾಜಿಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲೋಕಾರ್ಪಣೆಗೊಂಡ ಎರಡು ಪುಸ್ತಕಗಳ ಬಗ್ಗೆ ಪ್ರೊ.ರಾಜಶೇಖರ್ ಹೆಬ್ಬಾರ್ ಅರ್ಥಪೂರ್ಣ ಮಾಹಿತಿ ನೀಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ ಡಿಸೋಜ, ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಡಾ.ಎ.ಹರೀಶ್, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಬ್ದುಲ್ ಶರೀಫ್, ಪಿ.ಎ. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಪಿ.ಸೂಫಿ, ಅಹ್ಮದ್ ಶರೀಫ್ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News