ಜಾತಿ ಕಾರಣಕ್ಕಾಗಿ ಮದುವೆ ನಿರಾಕರಣೆ: ಸಂತ್ರಸ್ತೆ ಆರೋಪ
ಉಡುಪಿ, ಡಿ.21: ಐದು ವರ್ಷಗಳ ಕಾಲ ಪ್ರೀತಿಸಿ, ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿರುವ ಉಡುಪಿಯ ವಕೀಲ ಸುಕುಮಾರ್ ಶೆಟ್ಟಿ ಎಂಬಾತ ಇದೀಗ ಜಾತಿಯ ಕಾರಣ ನೀಡಿ ಯುವತಿಯನ್ನು ಮದುವೆಯಾಗಲು ನಿರಾಕರಿಸಿ ವಂಚನೆ ಎಸಗಿದ್ದಾನೆ ಎಂದು ಸಂತ್ರಸ್ತೆಯ ಸಂಬಂಧಿ ಉಮೇಶ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಸಂತ್ರಸ್ತ ಯುವತಿ ಜೊತೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ವಕೀಲನ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಾರ ಕಳೆದರೂ ಈವರೆಗೆ ಆರೋಪಿಯನ್ನು ಬಂಧಿಸಿಲ್ಲ. ಇದಕ್ಕೆ ರಾಜಕೀಯ ಪ್ರಭಾವ ಕೂಡ ಕಾರಣ ವಾಗಿದೆ. ಆದುದರಿಂದ ಆರೋಪಿಯನ್ನು ಕೂಡಲೇ ಬಂಧಿಸಿ, ಶಿಕ್ಷೆ ವಿಧಿಸುವ ಮೂಲಕ ಯುವತಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಇವರಿಬ್ಬರು 2015ರಿಂದ ಪ್ರೀತಿಸುತ್ತಿದ್ದು, ಆತ ಮದುವೆಯಾಗುವುದಾಗಿ ಯುವತಿಗೆ ನಂಬಿಸಿದ್ದನು. 2020ರ ಜುಲೈ ತಿಂಗಳಲ್ಲಿ ಮದುವೆ ಆಗುವಂತೆ ಕೇಳಿಕೊಂಡ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಸುಕುಮಾರ್ ಶೆಟ್ಟಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದನು. ನಮ್ಮಿಬ್ಬರ ಜಾತಿ ಬೇರೆ ಬೇರೆ ಯಾಗಿದ್ದು, ಇದರಿಂದ ನಾವು ಮದುವೆ ಆಗಲು ಆಗುವುದಿಲ್ಲ. ಮದುವೆ ಯಾದರೆ ನಾನು ನನ್ನ ಮನೆಯವರನ್ನು ಕೂಡ ಕಳೆದುಕೊಳ್ಳಬೇಕಾಗಬಹುದು ಎಂದು ಆತ, ಯುವತಿಗೆ ಹೇಳಿ ಮದುವೆ ನಿರಾಕರಿಸಿ ದ್ದನು ಎಂದು ಉಮೇಶ್ ದೂರಿದರು.
ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಎಸ್ಪಿಗೆ ದೂರು ನೀಡಿ ದರೂ ಯಾವುದೇ ಕ್ರಮ ಜರಗಿಸಿಲ್ಲ. ಈ ಮಧ್ಯೆ ಸುಕುಮಾರ್ ಶೆಟ್ಟಿ ಕಡೆ ಯವರು, ಯುವತಿಗೆ ಹಾಗೂ ನನಗೆ ಕರೆ ಮಾಡಿ ಜೀವಬೆದರಿಕೆ ಹಾಕುತ್ತಿದ್ದಾರೆ. ಈತ ಈಕೆಯ ಜೊತೆ ಮಾತ್ರವಲ್ಲದೆ ಬೇರೆ ಬೇರೆ ಯುವತಿ, ಮಹಿಳೆಯ ರೊಂದಿಗೂ ಸಂಬಂಧ ಇಟ್ಟುಕೊಂಡಿದ್ದಾನೆ ಎಂದರು.
ತಲೆಮರೆಸಿಕೊಂಡಿರುವ ಸುಕುಮಾರ್ ಶೆಟ್ಟಿಯ ಬಂಧನಕ್ಕೆ ಎರಡು ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.