×
Ad

ಕೊಕ್ಕಡ ದರೋಡೆ ಪ್ರಕರಣ; ವಿಶೇಷ ತಂಡ ರಚನೆ : ಎಸ್ಪಿ

Update: 2020-12-21 20:18 IST

ಮಂಗಳೂರು, ಡಿ. 21: ಕೊಕ್ಕಡದಲ್ಲಿ ನಡೆದ ದರೋಡೆ ಕೃತ್ಯದಲ್ಲಿ 8 ರಿಂದ 9 ದುಷ್ಕರ್ಮಿಗಳು ಭಾಗವಹಿಸಿದ್ದು, ಈ ಪ್ರಕರಣದ ತನಿಖೆಗೆ ಉಪ್ಪಿನಂಗಡಿ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃತ್ಯ ನಡೆಸಿದ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ಕಾರ್ಕಳದ ಮಾಳ, ಚಿಕ್ಕಮಗಳೂರಿನ ಜೈಪುರದಲ್ಲಿ ನಡೆದ ಕೃತ್ಯದ ಹೋಲಿಕೆ ಮತ್ತು ಆ ಪ್ರಕರಣದ ಆರೋಪಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

ರಾತ್ರಿ ವೇಳೆ ನಾಯಿ ಬೊಗಳುವುದನ್ನು ನೋಡಿ ಮನೆಯವರು ಹೊರಗೆ ಬಾಲ್ಕನಿಗೆ ಬಂದಿದ್ದು, ಈ ವೇಳೆ ದುಷ್ಕರ್ಮಿಗಳು ಮನೆಯೊಳಗೆ ಬಂದು ಕೃತ್ಯವೆಸಗಿ ದ್ದಾರೆ. ಘಟನೆ ವೇಳೆ ಮನೆಯ ಮಹಿಳೆಗೆ ಗಾಯವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.

ಸಿಸಿಟಿವಿ ಪರಿಶೀಲನೆ: ಘಟನೆ ನಡೆದ ಮನೆಯಲ್ಲಿ ಸಿಸಿಟಿವಿ ಇರಲಿಲ್ಲ. ಆದರೆ ರಸ್ತೆಗಳಲ್ಲಿ ಅಳವಡಿಸಿದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಒಂಟಿ ಮನೆಗಳಿರುವ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಈ ಹಿಂದೆಯೇ ಇಲಾಖೆಯಿಂದ ತಿಳಿಸಲಾಗಿತ್ತು. ಈ ಬಗ್ಗೆ ಮನೆಮನೆಗೆ ಕರಪತ್ರಗಳನ್ನು ಕೂಡ ಹಂಚಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಇನ್ನಾದರೂ ಜಾಗರೂಕರಾಗಬೇಕಿದೆ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News