×
Ad

ಯಕ್ಷಗಾನ ಕಲಾರಂಗ ಪ್ರಶಸ್ತಿಗಳಿಗೆ 17 ಕಲಾವಿದರ ಆಯ್ಕೆ

Update: 2020-12-21 21:38 IST

ಉಡುಪಿ, ಡಿ.21: ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆ ಹಿರಿಯ ಸಾಧಕರ ಸ್ಮರಣಾರ್ಥ ಹಾಗೂ ಗೌರವಾರ್ಥ ನೀಡುವ 17 ವಾರ್ಷಿಕ ಪ್ರಶಸ್ತಿ ಗಳಿಗೆ ಕರಾವಳಿಯ ತೆಂಕು ಮತ್ತು ಬಡಗುತಿಟ್ಟುಗಳ 17 ಮಂದಿ ಹಿರಿಯ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

ಡಾ.ಬಿ.ಬಿ. ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಅನಂತ ಕುಲಾಲ ಕಕ್ಕುಂಜೆ, ಪ್ರೊ.ಬಿ.ವಿ. ಆಚಾರ್ಯ ಸ್ಮಾರಕ ಪ್ರಶಸ್ತಿಗೆ ಮಹಾಬಲ ನಾಕ್ ಬುಕ್ಕಿಗುಡ್ಡೆ, ನಿಟ್ಟೂರು ಸುಂದರ ಶೆಟ್ಟಿ- ಮಹೇಶ್ ಡಿ.ಶೆಟ್ಟಿ ಪ್ರಶಸ್ತಿಗೆ ರಾಮಕೃಷ್ಣ ಶೆಟ್ಟಿಗಾರ್ ಮಿಜಾರು, ಬಿ. ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮಾರಕ ಪ್ರಶಸ್ತಿಗೆ ಬಾಬು ಕುಲಾಲ ಹಳ್ಳಾಡಿ, ಕೆ.ವಿಶ್ವಜ್ಞ ಶೆಟ್ಟಿ ಪ್ರಶಸ್ತಿಗೆ ನಗ್ರಿ ಮಹಾಬಲ ರೈ ಆಯ್ಕೆಯಾಗಿದ್ದಾರೆ.

ಕುತ್ಪಾಡಿ ಆನಂದ ಗಾಣಿಗ ಸ್ಮಾರಕ ಪ್ರಶಸ್ತಿಗೆ ಪ್ರಭಾಕರ ಹೆಗಡೆ ಚಿಟ್ಟಾಣಿ ಹೊನ್ನಾವರ, ಭಾಗವತ ನಾರ್ಣಪ್ಪ ಉಪ್ಪೂರು ಸ್ಮಾರಕ ಪ್ರಶಸ್ತಿಗೆ ರಾಮಕೃಷ್ಣ ಮಂದಾರ್ತಿ, ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ- ಭಾಗವತ ವಾದಿರಾಜ ಹೆಬ್ಬಾರ ಪ್ರಶಸ್ತಿಗೆ ಮಂಜುನಾಥ ಭಟ್ ಬೆಳ್ಳಾರೆ ಆಯ್ಕೆಯಾಗಿದ್ದಾರೆ.

ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿಗೆ ದಿನೇಶ ಅಮ್ಮಣ್ಣಾಯ ಅರಸಿನ ಮಕ್ಕಿ, ಶಿರಿಯಾರ ಮಂಜುನಾಯ್ಕಿ ಸ್ಮಾರಕ ಪ್ರಶಸ್ತಿಗೆ ತಿಮ್ಮಪ್ಪ ಹೆಗಡೆ ಶಿರಳಗಿ ಸಿದ್ದಾಪುರ, ಕೋಟ ವೈಕುಂಠ ಸ್ಮಾರಕ ಪ್ರಶಸ್ತಿಗೆ ಬಸವರಾಜ್ ಹುಣ್ಸೆಮಕ್ಕಿ, ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿಗೆ ರಾಮಚಂದ್ರ ಹೆಗಡೆ ಮೂರೂರು, ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿಗೆ ರಘುರಾಮ ಗೌಡ ಕೇಂಜ, ಐರೋಡಿ ರಾಮ ಗಾಣಿಗ ಪ್ರಶಸ್ತಿಗೆ ಉಮೇಶ ಹೆಬ್ಬಾರ್ ನಿಡ್ಲೆ ಇವರನ್ನು ಆಯ್ಕೆ ಮಾಡಲಾಗಿದೆ.

ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿಗೆ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಶ್ರೀಮತಿ ಪ್ರಬಾವತಿ ವಿ.ಶೆಣೈ, ಯು.ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿಗೆ ಮಹಾದೇವ ಪಟಗಾರ ಕುಮಟಾ ಹಾಗೂ ಎಂ. ತಿಮ್ಮಯ್ಯ ಗೌರವಾರ್ಥ ಪ್ರಶಸ್ತಿಗೆ ರಾಘವ ದಾಸ್ ಮುಡಿಪು ಇವರನ್ನು ಆಯ್ಕೆ ಮಾಡಲಾಗಿದೆ.

ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿಗೆ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಶ್ರೀಮತಿ ಪ್ರಬಾವತಿ ವಿ.ಶೆಣೈ, ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿಗೆ ಮಹಾದೇವ ಪಟಗಾರ ಕುಮಟಾ ಹಾಗೂ ಎಂ. ತಿಮ್ಮಯ್ಯ ಗೌರವಾರ್ಥ ಪ್ರಶಸ್ತಿಗೆ ರಾಘವ ದಾಸ್ ಮುಡಿಪು ಇವರನ್ನು ಆಯ್ಕೆ ಮಾಡಲಾಗಿದೆ. ಯಕ್ಷ ಚೇತನ ಪ್ರಶಸ್ತಿ: ಸಂಸ್ಥೆಯ ಹಿರಿಯ ಕಾರ್ಯಕರ್ತರಿಗೆ ನೀಡುವ ‘ಯಕ್ಷಚೇತನ’ ಪ್ರಶಸ್ತಿಗೆ ವಿದ್ಯಾಪೋಷಕ್ ಕೋಶಾಧಿಕಾರಿ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಸದಾಶಿವ ರಾವ್ ಆಯ್ಕೆಯಾಗಿದ್ದಾರೆ. ಎಲ್ಲಾ ಪ್ರಶಸ್ತಿಗಳು ತಲಾ 20,000 ರೂ. ನಗದು ಪುರಸ್ಕಾರವನ್ನು ಹೊಂದಿರುತ್ತದೆ.

ಯಕ್ಷ ಚೇತನ ಪ್ರಶಸ್ತಿ: ಸಂಸ್ಥೆಯ ಹಿರಿಯ ಕಾರ್ಯಕರ್ತರಿಗೆ ನೀಡುವ ‘ಯಕ್ಷಚೇತನ’ ಪ್ರಶಸ್ತಿಗೆ ವಿದ್ಯಾಪೋಷಕ್ ಕೋಶಾಧಿಕಾರಿ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಸದಾಶಿವ ರಾವ್ ಆಯ್ಕೆಯಾಗಿದ್ದಾರೆ. ಎಲ್ಲಾ ಪ್ರಶಸ್ತಿಗಳು ತಲಾ 20,000 ರೂ. ನಗದು ಪುರಸ್ಕಾರವನ್ನು ಹೊಂದಿರು ತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿ.26ರ ಶನಿವಾರ ಸಂಜೆ 5:00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News