ಬಾವಿಗೆ ಹಾರಿ ಆತ್ಮಹತ್ಯೆ
Update: 2020-12-21 21:44 IST
ಕುಂದಾಪುರ, ಡಿ.21: ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಹೆಬ್ರಿ ಮುದ್ರಾಡಿಯ ಮಹಾಬಲ ನಾಯ್ಕ ಎಂಬವರ ಮಗ ಸುಕೇಶ(34) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.20ರಂದು ರಾತ್ರಿ ಕುಂಭಾಶಿಯ ಬಾಡಿಗೆ ಮನೆಯ ಹಿಂಬದಿಯ ಬಾವಿಯ ರಾಟೆಗೆ ನೇಣು ಬಿಗಿದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.