ಮೀನಿಗೆ ಹಾಕಿದ್ದ ಬಲೆಗೆ ಸಿಲುಕಿ ಮೀನುಗಾರ ಮೃತ್ಯು
Update: 2020-12-21 21:56 IST
ಮಂಗಳೂರು, ಡಿ.21: ಮೀನುಗಾರಿಕೆಯಲ್ಲಿ ನಿರತನಾಗಿದ್ದ ಮೀನುಗಾರರೊಬ್ಬರು ಮೀನಿಗೆ ಹಾಕಿದ್ದ ಬಲೆಗೆ ತಾನೇ ಸಿಲುಕಿ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಗುಡ್ಡೆ ಕೊಪ್ಲ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ನಡೆದಿದೆ.
ಸುರತ್ಕಲ್ ನಿವಾಸಿ ಲೋಕೇಶ್ ಕುಂದರ್ (42) ಬಲೆಗೆ ಸಿಲುಕಿ ಮೃತಪಟ್ಟವರು.
ಲೋಕೇಶ್ ಅವರು ಸಮುದ್ರ ದಡದಲ್ಲಿ ರಬ್ಬರ್ ಟ್ಯೂಬ್ ಬಳಸಿಕೊಂಡು ಈಜುತ್ತಾ ಬಲೆ ಹಾಕುತ್ತಿದ್ದರು. ಈ ವೇಳೆ ಬಂದ ಬೃಹತ್ ತೆರೆಯು ಅವರನ್ನು ಬದಿಗೆ ತಳ್ಳಿದೆ. ಆಕಸ್ಮಿಕವಾಗಿ ಬಲೆ ಕಾಲಿಗೆ ಸಿಲುಕಿಕೊಂಡಿದ್ದರು. ಬಲೆಯಲ್ಲಿ ಮೀನುಗಾರ ಸಿಲುಕಿಕೊಂಡು ಬಲೆಯನ್ನು ಬಿಡಿಸಲು ಯತ್ನಿಸಿದ್ದರು. ಈ ವೇಳೆ ಅವರು ತೀವ್ರ ಅಸ್ವಸ್ಥರಾಗಿದ್ದರು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.