×
Ad

ಕೊಂಕಣಿ ಹಾಸ್ಯಕೃತಿ ‘ಫೆಲಿಸ್ ನವಿಡಾಡ್’ ಬಿಡುಗಡೆ

Update: 2020-12-21 22:16 IST

ಮಂಗಳೂರು, ಡಿ.21: ಯುವ ಹಾಸ್ಯ ಲೇಖಕ ರೋಶು ಬಜ್ಪೆಅವರ ಮೂರನೇ ಹಾಸ್ಯ ಬರಹಗಳ ಸಂಕಲನ ‘ಫೆಲಿಸ್ ನವಿಡಾಡ್’ ಶನಿವಾರ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಗೃಹದಲ್ಲಿ ಬಿಡುಗಡೆಗೊಂಡಿತು.

ಗಾಯಕ, ಚಲನಚಿತ್ರ ಕಲಾವಿದ ಅನಿವಾಸಿ ಭಾರತೀಯ ಉದ್ಯಮಿ ಜೋಸೆಫ್ ಮಥಾಯಸ್ ಕೃತಿ ಬಿಡುಗಡೆಗೊಳಿಸಿದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಪ್ರವೀಣ್ ಮಾರ್ಟಿಸ್, ಕಿಟಾಳ್ ಪ್ರಕಾಶನ ಸಂಸ್ಥೆಯ ಪ್ರಕಾಶಕ ಎಚ್ಚೆಮ್ ಪೆರ್ನಾಲ್ ಮಾತನಾಡಿದರು.
ಜೋಕಿಮ್ ಪಿಂಟೊ ವಾಮಂಜೂರ್ ವಂದಿಸಿದರು. ರೇಡಿಯೊ ಸಾರಂಗ್ ಕಾರ್ಯಕ್ರಮ ಸಂಯೋಜಕ ರೋಶನ್ ಕ್ರಾಸ್ತಾ ಕಾರ್ಯಕ್ರಮನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News