ಅಬುಧಾಬಿ ಟಿ-10 ಲೀಗ್‌ಗೆ ಗೇಲ್, ಅಫ್ರಿದಿ, ಬ್ರಾವೊ

Update: 2020-12-21 19:05 GMT
ಅಫ್ರಿದಿ

ಅಬುಧಾಬಿ: ವಿಶ್ವವಿಖ್ಯಾತ ಕ್ರಿಕೆಟಿಗರಾದ ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ ಮತ್ತು ಡ್ವೇನ್ ಬ್ರಾವೊ ಅವರು ನಾಲ್ಕನೇ ಆವೃತ್ತಿಯ ಅಬುಧಾಬಿ ಟಿ-10 ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಪಂದ್ಯಾವಳಿ ಜನವರಿ 28ರಿಂದ ಫೆಬ್ರವರಿ 6ರವರೆಗೆ ನಡೆಯಲಿದೆ.

ಇಡೀ ಪಂದ್ಯಾವಳಿ ಝಾಹಿದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಾರ್ವಕಾಲಿಕ ಶ್ರೇಷ್ಠ ಸೀಮಿತ ಓವರ್‌ಗಳ ಕ್ರಿಕೆಟಿಗ ಗೇಲ್ ಅಬುಧಾಬಿ ತಂಡದ ಐಕಾನ್ ಆಟಗಾರನಾಗಿ ಕೇಂದ್ರ ಹಂತವನ್ನು ತೆಗೆದುಕೊಳ್ಳಲಿದ್ದಾರೆ. ಗೇಲ್ ಟೀಮ್ ಅಬುಧಾಬಿಯ ಭಾಗವಾಗಿದ್ದರೆ, ಅಫ್ರಿದಿ ಖಲಂದರ್ಸ್‌ಗೆ ಐಕಾನ್ ಪ್ಲೇಯರ್, ಡೆಲ್ಲಿ ಬುಲ್ಸ್ ಪರ ಬ್ರಾವೊ, ನಾರ್ತರ್ನ್ ವಾರಿಯರ್ಸ್ ಪರ ರಸೆಲ್ ಮತ್ತು ಡೆಕ್ಕನ್ ಗ್ಲಾಡಿಯೇಟರ್ಸ್ ಪರ ನರೈನ್ ಆಡಲಿದ್ದಾರೆ. ಹಾಲಿ ಚಾಂಪಿಯನ್ ಮರಾಠಾ ಅರೇಬಿಯನ್ ಪಾಕಿಸ್ತಾನದ ಮಾಜಿ ನಾಯಕ ಶುಐಬ್ ಮಲಿಕ್ ಮತ್ತು ಶ್ರೀಲಂಕಾದ ಜೋಡಿ ಥಿಸರಾ ಪೆರೆರಾ (ಪುಣೆ ಡೆವಿಲ್ಸ್) ಮತ್ತು ಇಸುರು ಉದಾನಾ (ಬಾಂಗ್ಲಾ ಟೈಗರ್ಸ್) ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

‘‘ನಾನು ಅಬುಧಾಬಿ ಟಿ-10ಗೆ ಹಿಂದಿರುಗಿ ವಿಶ್ವದ ಅತ್ಯಂತ ಅಪೂರ್ವ ಕ್ರೀಡಾಂಗಣಗಳಲ್ಲಿ ಆಡಲು ಎದುರು ನೋಡುತ್ತಿದ್ದೇನೆ’’ ಎಂದು ಅಫ್ರಿದಿ ಹೇಳಿದರು. ಅಬುಧಾಬಿ ಟಿ-10 ಲೀಗ್ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಸಂಪೂರ್ಣ ಬೆಂಬಲ ಮತ್ತು ಅನುಮತಿಯನ್ನು ಪಡೆದ ವಿಶ್ವದ ಮೊದಲ 10 ಓವರ್ ಪಂದ್ಯಾವಳಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News