×
Ad

ಗ್ರಾಪಂ ಚುನಾವಣೆ: ದ.ಕ. 33.93 ಶೇ., ಉಡುಪಿ 32.90 ಶೇ. ಮತದಾನ

Update: 2020-12-22 13:40 IST

ಉಡುಪಿ/ಮಂಗಳೂರು, ಡಿ.22: ಮೊದಲನೇ ಹಂತದ ಗ್ರಾಮ ಪಂಚಾಯಚ್ ಚುನಾವಣೆಯಲ್ಲಿ ಮಧ್ಯಾಹ್ನ 11 ಗಂಟೆಯ ವೇಳೆ ದ.ಕ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಒಟ್ಟು 33.93 ಶೇ. ಹಾಗೂ ಉಡುಪಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಟ್ಟು 32.90 ಶೇ. ಮತದಾನವಾಗಿದೆ.

ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ 31.87 ಶೇ., ಮೂಡುಬಿದಿರೆ ತಾಲೂಕಿನಲ್ಲಿ 32,80 ಶೇ. ಹಾಗೂ ಬಂಟ್ವಾಳ ತಾಲೂಕಿನಲ್ಲಿ 34.58 ಶೇ. ಮತದಾನವಾಗಿದೆ.

ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 33 ಶೇ., ಹೆಬ್ರಿ ತಾಲೂಕಿನಲ್ಲಿ 34 ಶೇ., ಬ್ರಹ್ಮಾವರ ತಾಲೂಕಿನಲ್ಲಿ 33 ಶೇ. ಹಾಗೂ ಬೈಂದೂರು ತಾಲೂಕಿನಲ್ಲಿ 32.20 ಶೇತ ಮತದಾನವಾಗಿರುವುದು ವರದಿಯಾಗಿದೆ.

ಸೊಮೇಶ್ವರದಲ್ಲಿ ಶೇ.50 ಮತದಾನ
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಪಂ ವ್ಯಾಪ್ತಿಯ ಸೋಮೇಶ್ವರ ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ 11:30ಕ್ಕೆ ಶೇ.50ರಷ್ಟು ಮತದಾನವಾಗಿದೆ.

ನಕ್ಸಲ್ ಬಾಧಿತ ಪ್ರದೇಶದಲ್ಲಿರುವ ಈ ಸೂಕ್ಷ್ಮ ಮತಗಟ್ಟೆಯಲ್ಲಿ ಒಟ್ಟು 662 ಮತಗಳಿದ್ದು 11:30ರ ವೇಳೆ 337 ಮತಗಳು ಚಲಾವಣೆಯಾಗಿವೆ. ಬೆಳಗಿನಿಂದಲೇ ಇಲ್ಲಿ ಬಿರುಸಿನ ಮತದಾನವಾಗಿದ್ದು, ಬಿಸಿಲೇರುತಿದ್ದಂತೆ ಜನ ಮತಗಟ್ಟೆಗೆ ಬರುವ ಸಂಖ್ಯೆ ಕಡಿಮೆಯಾಯಿತು. ಅಪರಾಹ್ನ 3 ಗಂಟೆ ಬಳಿಕ ಮತ್ತೆ ಹೆಚ್ಚುವ ನಿರೀಕ್ಷೆ ಇದೆ.

ಈ ಮೊದಲಿನ ಪ್ರತಿ ಚುನಾವಣೆಯಲ್ಲೂ ಈ ಮತಗಟ್ಟೆಯಲ್ಲಿ ಶೇ.90ರ ಆಸುಪಾಸು ಮತದಾನವಾಗುತ್ತದೆ. 

ಕಾಸನಮಕ್ಕಿ ಮತಗಟ್ಟೆಯಲ್ಲಿ ಶೇ.59 ಮತದಾನ
ಹೆಬ್ರಿಯ ನಾಡ್ಪಾಲು ಗ್ರಾಪಂ ವ್ಯಾಪ್ತಿಯ ಕಾಸನಮಕ್ಕಿ ಕಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಅಪರಾಹ್ನ 12:15ಕ್ಕೆ ಶೇ.59ರಷ್ಟು ಮತದಾನವಾಗಿದೆ.
ಈ ಮತಗಟ್ಟೆಯಲ್ಲಿದ್ದ 722 ಮತದಾರರಲ್ಲಿ 428 ಮಂದಿ ಈವರೆಗೆ ಮತ ಚಲಾಯಿಸಿದ್ದಾರೆ.

ಈ ಮತಗಟ್ಟೆಗೆ ಚುನಾವಣಾ ವೀಕ್ಷಕ, ಮಂಗಳೂರು ಮುಡಾ ಆಯುಕ್ತ ದಿನೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಮಾತನಾಡಿದ ಅವರು, ಎಲ್ಲಾ ಕಡೆ ವ್ಯವಸ್ಥಿತವಾಗಿ, ನೀತಿ ಸಂಹಿತೆ ಉಲ್ಲಂಘಿಸಿದೇ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಮತದಾನವಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News