ಕೋಟತಟ್ಟು ಮತಗಟ್ಟೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತದಾನ
Update: 2020-12-22 19:23 IST
ಉಡುಪಿ, ಡಿ.22: ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಬೆಳಗ್ಗೆ ಕೋಟತಟ್ಟು ಗ್ರಾಪಂ ಕಚೇರಿಯಲ್ಲಿರುವ ಮಗಟ್ಟೆಯಲ್ಲಿ ಮತದಾನ ಮಾಡಿದರು.
ಸಚಿವರು ಪತ್ನಿ ಶಾಂತಾ, ಮಕ್ಕಳಾದ ಸ್ವಾತಿ, ಶೃತಿ ಜೊತೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದ ಸಚಿವರು, ಜನಸಾಮಾನ್ಯರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಶ್ರಮಿಸಲು ಈ ಚುನಾವಣೆ ಒಂದು ಅಪೂರ್ವ ಅವಕಾಶ. ಪಂಚಾಯತ್ ರಾಜ್ ಅಂದರೆ ಆಳಿಸಿಕೊಳ್ಳುವವರ ಆಡಳಿತ. ಕರ್ನಾಟಕ ರಾಜ್ಯದಲ್ಲಿ 99 ಸಾವಿರ ಜನಪ್ರತಿನಿಧಿ ಗಳು ಆಯ್ಕೆಯಾಗುವ ಪ್ರಕ್ರಿಯೆ ಇದಾಗಿದೆ ಎಂದರು.
ಮತದಾರರು ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಉತ್ತಮ ಗ್ರಾಮ ಸರಕಾರ ಸ್ಥಾಪನೆಗೆ ಕೈಜೋಡಿಸ ಬೇಕು. ಈ ಅಪೂರ್ವ ಅವಕಾಶವನ್ನು ಎಲ್ಲರು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.