ಕ್ರಿಸ್ಮಸ್ ಶಾಂತಿ ಸೌಹಾರ್ದತೆಯ ಪ್ರತೀಕ: ಫಾ.ಮೈಕಲ್ ಡಯಾಸ್

Update: 2020-12-22 14:11 GMT

ಶಿರ್ವ, ಡಿ.22: ಕಿಸ್ಮಸ್ ಎಂದರೆ ಒಂದು ದಿನಕ್ಕೆ ಮಾತ್ರ ಸೀಮಿತವಾದ ಹಬ್ಬವಲ್ಲ. ಕ್ರಿಸ್ತನ ಸಂದೇಶವನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಇತರ ರಿಗೆ ಮಾದರಿಯಾಗಿ ಬದುಕುವುದು. ಇದು ಶಾಂತಿ, ಸಹನೆ, ಪ್ರೀತಿ, ಸಹಬಾಳ್ವೆಯ ಪ್ರತೀಕ ಎಂದು ಶಿರ್ವ ಆರೋಗ್ಯ ಮಾತಾ ಚರ್ಚಿನ ಸಹಾಯಕ ಧರ್ಮಗುರು ರೆ.ಫಾ.ರೋಹನ್ ಮೈಕಲ್ ಡಯಾಸ್ ಹೇಳಿದ್ದಾರೆ.

ಶಿರ್ವ ರೋಟರಿ ಕ್ಲಬ್ ವತಿಯಿಂದ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಲಾದ ಕ್ರಿಸ್ಮಸ್ ಸೌಹಾರ್ದ ಕೂಟವನ್ನು ಕೇಕ್ ಕತ್ತರಿಸು ವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ವಿಷ್ಣುಮೂರ್ತಿ ಸರಳಾಯ ವಹಿಸಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ರೋಟರಿ ಪೂರ್ವಾ ಧ್ಯಕ್ಷ ಮತಾ ಯಸ್ ಲೋಬೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ವಾಧ್ಯಕ್ಷ ಮೆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಕಾರ್ಯದರ್ಶಿ ಆಲ್ವಿನ್ ಅಮಿತ್ ಅರಾನ್ಹಾ ವಂದಿಸಿದರು. ನಂತರ ಕ್ರಿಸ್ಮಸ್ ಗೀತೆಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News