ಹೊಳೆಗೆ ಬಿದ್ದು ಯುವಕ ಮೃತ್ಯು
Update: 2020-12-22 22:20 IST
ಬೈಂದೂರು, ಡಿ.22: ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಉಪ್ಪುಂದ ಗ್ರಾಮದ ಸೋಮಯ್ಯ ದೇವಾಡಿಗ ಎಂಬವರ ಮಗ ಗೋವಿಂದ (32) ಎಂದು ಗುರುತಿಸಲಾಗಿದೆ. ಇವರು ಡಿ.20ರಂದು ಸಂಜೆ ವೇಳೆ ಮೀನು ಹಿಡಿಯಲು ಗಾಳ ಹಾಗೂ ಬಲೆಯನ್ನು ತೆಗೆದುಕೊಂಡು ಹೋಗಿದ್ದು, ಹೊಳೆಯ ದಡದಲ್ಲಿ ನಿಂತು ಮೀನು ಹಿಡಿಯುತ್ತಿರುವಾಗ ಆಕಸ್ಮಿಕ ವಾಗಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಇವರ ಮೃತದೇಹ ಡಿ.21 ರಂದು ಬೆಳಗ್ಗೆ ಪತ್ತೆಯಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.