×
Ad

ಸುಂದರ ಕಟ್ಟಡಗಳನ್ನು ಕಟ್ಟಲು ಸರಕಾರಕ್ಕೆ ಟ್ರಂಪ್ ಆದೇಶ!

Update: 2020-12-22 22:48 IST

ವಾಶಿಂಗ್ಟನ್, ಡಿ. 22: ಭವಿಷ್ಯದಲ್ಲಿ ನಿರ್ಮಿಸಲಾಗುವ ಕೇಂದ್ರ ಸರಕಾರದ ಕಚೇರಿಗಳ ಕಟ್ಟಡಗಳು ಸುಂದರವಾಗಿರಬೇಕು ಹಾಗೂ ಅವುಗಳನ್ನು ಸಾಧ್ಯವಿರುವಷ್ಟೂ ಗ್ರೆಕೊ-ರೋಮನ್ ಶೈಲಿಯಲ್ಲಿ ನಿರ್ಮಿಸಬೇಕು ಎಂದು ಹೇಳುವ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೊರಡಿಸಿದ್ದಾರೆ.

ಟ್ರಂಪ್ ಇನ್ನು ನಾಲ್ಕು ವಾರಗಳ ಕಾಲ ಮಾತ್ರ ಅಧಿಕಾರದಲ್ಲಿರುತ್ತಾರೆ. ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿಜಯಿಯಾಗಿದ್ದು, ಜನವರಿ 20ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

1950ರ ಬಳಿಕ ನಿರ್ಮಿಸಲಾದ ಸರಕಾರಿ ಕಟ್ಟಡಗಳನ್ನು ಗುರಿಯಾಗಿಸಿ ಟ್ರಂಪ್ ಈ ಆದೇಶ ಹೊರಡಿಸಿದ್ದಾರೆ. ರಾಜಧಾನಿ ವಾಶಿಂಗ್ಟನ್‌ನ ಕಟ್ಟಡಗಳು ಮಿಶ್ರ ಶೈಲಿಯಲ್ಲಿದ್ದು ಪರಸ್ಪರ ಹೊಂದಾಣಿಕೆ ಕಾಣುತ್ತಿಲ್ಲ ಹಾಗೂ ಸರಕಾರವು ಸುಂದರ ಕಟ್ಟಡಗಳನ್ನು ಕಟ್ಟುವುದನ್ನೇ ನಿಲ್ಲಿಸಿ ಬಿಟ್ಟಿದೆ ಎಂದು ಅವರು ತನ್ನ ಆದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News