ಮೂರನೇ ಟ್ವೆಂಟಿ-20: ಪಾಕ್‌ಗೆ 4 ವಿಕೆಟ್‌ಗಳ ಜಯ

Update: 2020-12-22 18:36 GMT

ನೇಪಿಯರ್: ಆರಂಭಿಕ ಬ್ಯಾಟ್ಸ್‌ಮನ್-ವಿಕೆಟ್ ಕೀಪರ್ ಮುಹಮ್ಮದ್ ರಿಝ್ವ್‌ನ್ ವೃತ್ತಿಜೀವನದಲ್ಲೇ ಗಳಿಸಿದ ಅತ್ಯುತ್ತಮ 89 ರನ್‌ಗಳ ನೆರವಿನಲ್ಲಿ ಪಾಕಿಸ್ತಾನ ತಂಡ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಆತಿಥೇಯ ನ್ಯೂಝಿಲ್ಯಾಂಡ್ ವಿರುದ್ಧ 4 ವಿಕೆಟ್‌ಗಳ ಜಯ ಗಳಿಸಿದೆ.

ಗೆಲುವಿಗೆ 177 ರನ್‌ಗಳ ಸವಾಲನ್ನು ಪಡೆದ ಪಾಕಿಸ್ತಾನ ತಂಡ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿದೆ.

  ರಿಝ್ವನ್ 59 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 89 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಪಂದ್ಯಗಳನ್ನು ಜಯಿಸಿದ್ದ ನ್ಯೂಝಿಲ್ಯಾಂಡ್ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ರಿಝ್ವನ್ ಮತ್ತು ಮುಹಮ್ಮದ್ ಹಫೀಝ್ 2ನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಿಗೆ ನೆರವಾದರು. ಇದಕ್ಕೂ ಮೊದಲು ನ್ಯೂಝಿಲ್ಯಾಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 173 ರನ್ ಗಳಿಸಿತ್ತು. ನ್ಯೂಝಿಲ್ಯಾಂಡ್ ಪರ ಡೆವೊನ್ ಕಾನ್ವೇ 63 ರನ್ ಗಳಿಸಿದರು. ಫಹೀಮ್ ಅಶ್ರಫ್ 20ಕ್ಕೆ 3 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News