×
Ad

ಬಂದರು ಮಂಡಳಿ ಅಧ್ಯಕ್ಷ ಎವಿ ಅಕ್ಕರಾಜುಗೆ ಡಾಕ್ಟರೇಟ್; ಇಂಟಕ್ ವತಿಯಿಂದ ಸನ್ಮಾನ

Update: 2020-12-23 17:29 IST

ಮಂಗಳೂರು : ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷರಾದ ಎ.ವಿ ರಮಣ  ಇವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಖ್ಯ ವಿಷಯದಲ್ಲಿ ಶನಿವಾರ ಪ್ರತಿಷ್ಠಿತ ಡಾಕ್ಟರೇಟ್ ಪದವಿಯನ್ನು ಪಡೆದಿದ್ದು ಈ ಸಂದರ್ಭ ಕೆನರಾ ಪೋರ್ಟ್ ಡಾಕ್  ವರ್ಕರ್ಸ್ ಯೂನಿಯನ್  ವತಿಯಿಂದ  ಬುಧವಾರ ಅಭಿನಂದಿಸಿ ಸಮ್ಮಾನಿಸಲಾಯಿತು.

ಅಧ್ಯಕ್ಷರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಹಾರಾರ್ಪಣೆಗೈದು ಫಲಪುಷ್ಪ ನೀಡಿ ಸಮ್ಮಾನಿಸಲಾಯಿತು. ಇಂಟಕ್ ಮುಖಂಡ ,ಎನ್ ಎಂ ಪಿ ಟಿ  ಟ್ರಸ್ಟಿ ಅಬೂಬಕರ್ ಕೃಷ್ಣಾಪುರ ಅವರು ಅಭಿನಂದಿಸಿ,  ನವಮಂಗಳೂರು ಬಂದರು  ಇವರ ಅವಧಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ,ಕೆಲಸದ ಒತ್ತಡದ ನಡುವೆಯೂ ಡಾಕ್ಟರೇಟ್ ಪಡೆದಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ ಎಂದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಬಂದರು ಮಂಡಳಿ  ಅಧ್ಯಕ್ಷ ಎ.ವಿ ರಮಣ ಅವರು ಟ್ರಸ್ಟಿಯಾಗಿ ಅಬೂಬಕರ್ ಅವರು ಕಾರ್ಮಿಕರ ನ್ಯಾಯೋಚಿತ ಬೇಡಿಕೆಗಳನ್ನು ಮಂಡಿಸಿ ಬಂದರಿನ ಬೆಳವಣಿಗೆಯಲ್ಲೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬಂದರಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಕೆ.ಫಾರೂಕ್, ಎಂ. ಶಿವಣ್ಣ, ಭರತ್ ಕುಮಾರ್, ನಯನ್ ಕುಮಾರ್, ಚರಣ್ ದಾಸ್, ಸುಕುಮಾರ್ ನಾಯ್ಕ್, ಅನಿಲ್ ಡಿಸೋಜ, ಸದಾನಂದ ಶೆಟ್ಟಿ, ಹರಿಶ್ ಸುವರ್ಣ, ಅಶೋಕ್, ಟಿ.ಕೆ ಕೋಯ, ಇಬ್ರಾಹಿಂ, ಶ್ರೀನಿವಾಸ ಮೂರ್ತಿ, ನರೇಶ್, ಸ್ಟಿವನ್ ಡಿಸೋಜ, ಯುವರಾಜ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News