×
Ad

‘ಸೂಫಿಯುಂ ಸುಜಾದಯುಂ’ ಮಲಯಾಳಂ ಚಿತ್ರದ ನಿರ್ದೇಶಕ ಶಾನವಾಸ್ ಮೃತ್ಯು

Update: 2020-12-23 18:04 IST
photo: malayala manorama

ಕೊಯಂಬತ್ತೂರು,ಡಿ.23: ಮಲಯಾಳಂ ಭಾಷೆಯ ಪ್ರೇಕ್ಷಕರನ್ನುಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಜನಪ್ರಿಯತೆ ಗಳಿಸಿದ್ದ ‘ಸೂಫಿಯುಂ ಸುಜಾದಯುಂ’ ಮಲಯಾಳಂ ಸಿನಿಮಾದ ನಿರ್ದೇಶಕ ನಾರಾಣಿಪ್ಪುಝ ಶಾನವಾಸ್ ನಿಧನರಾಗಿದ್ದಾರೆ ಎಂದು mathrubhumi.com ವರದಿ ಮಾಡಿದೆ.

ತನ್ನ ಮುಂದಿನ ಸಿನಿಮಾದ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ಬಳಿಕ ಮೆದುಳಿನ ಕಾರ್ಯವೂ ಸ್ಥಗಿತಗೊಂಡಿತ್ತು ಎಂದು ತಿಳಿದು ಬಂದಿದೆ. ಹೃದಾಯಾಘಾತದ ಬಳಿಕ ಕೋಯಂಬತ್ತೂರು ಕೆಜಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿತ್ತು. ಬಳಿಕ ಮೆದುಳು ಕೂಡಾ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಬುಧವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ ಎಂದು  ಬಂದಿದೆ.

ಆಸ್ಪತ್ರೆಗೆ ಸೇರಿಸಿದಂದಿನಿಂದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಇಂದು ಬೆಳಗ್ಗೆಯೇ ಆಸ್ಪತ್ರೆಯ ಅಧಿಕೃತರು ಶಾನವಾಸ್ ರ ಮೆದುಳು ನಿಷ್ಕ್ರಿಯವಾಗಿದೆ ಎಂದು ಮಾಹಿತಿ ನೀಡಿದ್ದರು.

ದೇವ್ ಮೋಹನ್, ಜಯಸೂರ್ಯ ಮತ್ತು ಅದಿತಿ ರಾವ್ ಹೈದರಿ ನಟಿಸಿದ್ದ ಸೂಫೀಯುಂ ಸುಜಾದಯುಂ’ ಚಿತ್ರವು ವ್ಯಾಪಕ ಜನಮನ್ನಣೆ ಪಡೆದಿತ್ತು. 2015ರಲ್ಲಿ ಅವರು ನಿರ್ದೇಶಿಸಿದ್ದ ‘ಕರಿ’ ಚಿತ್ರವು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News