×
Ad

ಪದೋನ್ನತಿ ಹೊಂದಿ ವರ್ಗಾವಣೆಗೊಂಡ ನ್ಯಾಯಾಧೀಶ ಪಂಡಿತ್‌ಗೆ ಬೀಳ್ಕೊಡುಗೆ

Update: 2020-12-23 20:53 IST

ಉಡುಪಿ, ಡಿ.23: ಪದೋನ್ನತಿ ಹೊಂದಿ ಚಿಕ್ಕಬಳ್ಳಾಪುರ ಜಿಲ್ಲೆಯ ಕುಟುಂಬ ನ್ಯಾಯಾ ಲಯದ ಪ್ರಧಾನ ನ್ಯಾಯಾಧೀಶರಾಗಿ ವರ್ಗಾವಣೆ ಗೊಂಡಿರುವ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಪಂಡಿತ್ ಅವರ ಬೀಳ್ಕೊಡುಗೆ ಸಮಾರಂಭವನ್ನು ಬುಧವಾರ ಉಡುಪಿ ವಕೀಲರ ಸಂಘದ ಕಚೇರಿಯಲ್ಲಿ ಆಯೋಜಿಸ ಲಾಗಿತ್ತು.

ನಿರ್ಗಮನ ನ್ಯಾಯಾಧೀಶರನ್ನು ಸನ್ಮಾನಿಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎಸ್. ಮಾತನಾಡಿ, ನ್ಯಾಯಾಧೀಶ ರಿಗೆ ಸಲಹೆ ಎಂಬುದು ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಅವಸರದ ತೀರ್ಮಾನ ತೆಗೆದುಕೊಳ್ಳಬಾರದು. ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ವಿಶೇಷ ಸಂದರ್ಭ ದಲ್ಲಿ ಮಾತ್ರ ಸಮಯಾವಕಾಶ ನೀಡದೆ ತೀರ್ಪು ನೀಡಲು ಅಕಾಶ ಇರುತ್ತದೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ನ್ಯಾಯಾಧೀಶ ವಿವೇಕಾನಂದ ಪಂಡಿತ್ ಮಾತನಾಡಿ, ನ್ಯಾಯಾಲಯ ಎಂಬುದು ದೇವಾಲಯ ಇದ್ದಂತೆ. ವಕೀಲರು ಅದರ ಕಂಬಗಳು. ದೇವಾಲಯಗಳಿಗೆ ಕಂಬಗಳು ಹೇಗೆ ಮುಖ್ಯವೋ ಹಾಗೆ ನ್ಯಾಯಾಲಯ ದಲ್ಲಿ ಉತ್ತಮ ನ್ಯಾಯದಾನ ಮಾಡಲು ವಕೀಲರ ಪಾತ್ರ ಕೂಡ ಅತೀ ಅಗತ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಕಾವೇರಿ, ಅನುಪಮಾ ವಿವೇಕಾನಂದ ಪಂಡಿತ್ ಉಪಸ್ಥಿತರಿ ದ್ದರು. ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ವಕೀಲ ರಾಜಶೇಖರ ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News