ಬೆಂಕಿ ಅಕಸ್ಮಿಕ: ವೃದ್ಧೆ ಮೃತ್ಯು
Update: 2020-12-23 21:15 IST
ಮಣಿಪಾಲ, ಡಿ.23: ತುಳಸಿಕಟ್ಟೆಯ ದೀಪ ಉಟ್ಟ ಸೀರೆಗೆ ತಗಲಿದ ಪರಿ ಣಾಮ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಇಂದ್ರಾಳಿ ಸಮೀಪ ನಡೆದಿದೆ.
ಮೃತರನ್ನು ಇಂದ್ರಾಳಿ ಒಂದನೆ ಕ್ರಾಸ್ ನಿವಾಸಿ ಸುಮಿತ್ರ ಶೆಣೈ(93) ಎಂದು ಗುರುತಿಸಲಾಗಿದೆ. ಇವರು ಡಿ.21ರಂದು ಬೆಳಗ್ಗೆ ಮನೆಯ ಬಳಿ ಇರುವ ತುಳಸಿಕಟ್ಟೆಯ ಎದುರು ಕುಳಿತುಕೊಂಡಿರುವಾಗ ತುಳಸಿಕಟ್ಟೆಯ ದೀಪ ಅವರು ಉಟ್ಟುಕೊಂಡಿದ್ದ ಸೀರೆಗೆ ತಗಲಿ ಬೆಂಕಿ ಹತ್ತಿಕೊಂಡಿತ್ತೆ ನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆಗೆ ಸ್ಪಂದಿಸದೆ ಡಿ.22ರಂದು ರಾತ್ರಿ 10ಗಂಟೆಗೆ ಸುಮಾರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.