ಮಾಸ್ಕ್ ಒಂದೇ ಕೊರೋನದಿಂದ ರಕ್ಷಣೆ ನೀಡುವುದಿಲ್ಲ: ಅಧ್ಯಯನ

Update: 2020-12-23 16:08 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಡಿ. 23: ಸುರಕ್ಷಿತ ಅಂತರ ಕಾಪಾಡಿಕೊಳ್ಳದೆ, ಮುಖಗವಸುವೊಂದೇ ಕೊರೋನ ವೈರಸ್‌ನಿಂದ ರಕ್ಷಣೆ ನೀಡದು ಎಂದು ‘ಫಿಸಿಕ್ಸ್ ಆಫ್ ಫ್ಲುಯಿಡ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದು ತಿಳಿಸಿದೆ.

ಜನರು ಕೆಮ್ಮುವಾಗ ಅಥವಾ ಸೀನುವಾಗ ಹಾರುವ, ಕೊರೋನ ವೈರಸನ್ನು ಒಳಗೊಂಡ ಸೂಕ್ಷ್ಮ ಹನಿಗಳ ಹರಡುವಿಕೆಯನ್ನು ಮುಖಗವಸುಗಳ ಐದು ವಿವಿಧ ಮಾದರಿಯ ಬಟ್ಟೆಗಳು ಹೇಗೆ ನಿಭಾಯಿಸುತ್ತವೆ ಎನ್ನುವುದನ್ನು ಸಂಶೋಧನೆಯ ವೇಳೆ ಪರಿಶೀಲಿಸಲಾಯಿತು.

  ಪರೀಕ್ಷೆಯಲ್ಲಿ ಬಳಸಲಾದ ಎಲ್ಲ ಬಟ್ಟೆಗಳು ಹನಿಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ತಡೆದಿವೆ ಎನ್ನುವುದು ಸಾಬೀತಾಯಿತು. ಆದರೆ, ಸುರಕ್ಷಿತ ಅಂತರವು 6 ಅಡಿಗಿಂತಲೂ ಕಡಿಮೆಯಿದ್ದಾಗ, ಸಾಕಷ್ಟು ಸಂಖ್ಯೆಯ ಹನಿಗಳು ಹಲವು ಮಾದರಿಗಳ ಬಟ್ಟೆಗಳನ್ನು ಭೇದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದವು ಎನ್ನುವುದೂ ಈ ಸಂದರ್ಭದಲ್ಲಿ ಪತ್ತೆಯಾಯಿತು.

‘‘ಮುಖಗವಸು ಖಂಡಿತವಾಗಿಯೂ ಉಪಯುಕ್ತ. ಆದರೆ, ಜನರು ತುಂಬಾ ಸಮೀಪದಲ್ಲಿದ್ದರೆ, ವೈರಸನ್ನು ಸ್ವೀಕರಿಸುವ ಅಥವಾ ಹರಡುವ ಸಾಧ್ಯತೆ ಇದ್ದೇ ಇದೆ’’ ಎಂದು ಅಮೆರಿಕದ ನ್ಯೂ ಮೆಕ್ಸಿಕೊ ಸ್ಟೇಟ್ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಕೃಷ್ಣ ಕೋಟ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News