ಬಾಕ್ಸಿಂಗ್ ಡೇ ಟೆಸ್ಟ್: ಗಿಲ್, ಜಡೇಜ ನೆಟ್ ಅಭ್ಯಾಸ

Update: 2020-12-23 18:47 GMT

ಸಿಡ್ನಿ: ಡಿಸೆಂಬರ್ 26ರಿಂದ ಪ್ರಾರಂಭವಾಗುವ ಬಾಕ್ಸಿಂಗ್ ಡೇ ಟೆಸ್ಟ್ ತಯಾರಿಗೆ ಬುಧವಾರ ನಡೆದ ತೀವ್ರವಾದ ನೆಟ್ ಅಭ್ಯಾಸದಲ್ಲಿ ಟೀಮ್ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ರೆಡ್ ಬಾಲ್ ಕ್ರಿಕೆಟ್‌ನತ್ತ ತನ್ನ ಗಮನ ಹರಿಸಿದರು.

ಸಿಡ್ನಿಯಲ್ಲಿ ನಡೆದ ಹಗಲು-ರಾತ್ರಿ ಅಭ್ಯಾಸ ಪಂದ್ಯದಲ್ಲಿ 43 ಮತ್ತು 65 ರನ್ ಗಳಿಸಿದ್ದರೂ ಮೊದಲ ಟೆಸ್ಟ್ ಪಂದ್ಯದ ಅಂತಿಮ ಹನ್ನೊಂದರಲ್ಲಿ ಸ್ಥಾನ ವಂಚಿತರಾಗಿದ್ದ ಶುಭ್‌ಮನ್ ಗಿಲ್ ನೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮಯಾಂಕ್ ಅಗರ್ವಾಲ್ ಅವರೊಂದಿಗೆ ಅವರು ತಮ್ಮ ಕೌಶಲ್ಯಗಳನ್ನು ತೋರಿಸಿದರು. ಈ ಜೋಡಿ ಎರಡನೇ ಟೆಸ್ಟ್ ಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ಲೋಕೇಶ್ ರಾಹುಲ್ ಬಹಳ ಹೊತ್ತು ನೆಟ್ ಪ್ರಾಕ್ಟೀಸ್ ನಡೆಸಿದರು. ಬ್ಯಾಟಿಂಗ್ ತರಬೇತುದಾರ ವಿಕ್ರಮ್ ರಾಥೋಡ್ ಅವರು ಶಾ ಅವರೊಂದಿಗೆ ಮಾತುಕತೆ ನಡೆಸಿದರು. ಅವರು ಅಡಿಲೇಡ್‌ನಲ್ಲಿ ಕಳಪೆ ಪ್ರದರ್ಶನದ ನಂತರ ಅಂತಿಮ ಹನ್ನೊಂದರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದ್ದಾರೆ.

ಇದೇ ವೇಳೆ ರವೀಂದ್ರ ಜಡೇಜ ಫಿಟ್‌ನೆಸ್ ಸಾಮರ್ಥ್ಯವನ್ನು ಸಾಬೀತುಪಡಿಸಲು ಒಂದು ಗಂಟೆ ಕಾಲ ಬೌಲಿಂಗ್ ನಡೆಸಿದರು. ಗಾಯದ ಕಾರಣದಿಂದಾಗಿ ಆಲ್‌ರೌಂಡರ್ ಜಡೇಜ ಅಂತಿಮ ಎರಡು ಟ್ವೆಂಟಿ-20 ಮತ್ತು ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

ಅಭ್ಯಾಸ ಪಂದ್ಯದಲ್ಲಿ 73 ಎಸೆತಗಳಲ್ಲಿ 103 ರನ್ ಗಳಿಸಿದ್ದ ರಿಷಭ್ ಪಂತ್ ಅವರು ಎರಡನೇ ಟೆಸ್ಟ್‌ನಲ್ಲಿ ಸಹಾ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ಮುಹಮ್ಮದ್ ಸಿರಾಜ್ ಮತ್ತು ನವದೀಪ್ ಸೈನಿ ಅವರು ಶಾರ್ದುಲ್ ಠಾಕೂರ್ ಜೊತೆಯಲ್ಲಿ ರಹಾನೆಗೆ ಬೌಲಿಂಗ್ ನಡೆಸಿದರು, ಈ ಮೂವರು ಮೂರನೇ ವೇಗಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News