×
Ad

ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿದ್ದ ಹೊಸ ಕೊರೋನ ವೈರಾಣು ಇಂಗ್ಲೆಂಡ್‍ನಲ್ಲಿಯೂ ಪತ್ತೆ

Update: 2020-12-24 14:41 IST

ಲಂಡನ್:  ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡು ಬಂದ ಹೊಸ ಕೊರೋನ ವೈರಾಣು ಇದೀಗ ಬ್ರಿಟನ್‍ನಲ್ಲೂ ಕಾಣಿಸಿಕೊಂಡಿದ್ದು, ಇದು ಬಹಳ ಬೇಗ ಸೋಂಕು ಹರಡುವಿಕೆಗೆ ಕಾರಣವಾಗಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.

ಈ ರೀತಿಯ ಕೊರೋನದ ಎರಡು ಪ್ರಕರಣಗಳು ಬ್ರಿಟನ್‍ನಲ್ಲಿ ವರದಿಯಾಗಿದ್ದು, ಎರಡೂ ಪ್ರಕರಣಗಳಲ್ಲಿ ಸೋಂಕಿತರು ಕೆಲ ವಾರಗಳ ಹಿಂದೆ ದಕ್ಷಿಣ ಆಪ್ರಿಕಾಗೆ ಪ್ರಯಾಣ ಬೆಳೆಸಿದವರಾಗಿದ್ದಾರೆ ಎಂದು ಬ್ರಿಟಿಷ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹೆನ್ಕಾಕ್ ಹೇಳಿದ್ದಾರೆ.

ಬ್ರಿಟನ್ ಈಗಾಗಲೇ ಬಹಳ ಬೇಗ ಸೋಂಕು ಹರಡಬಲ್ಲ ರೂಪಾಂತರಗೊಂಡ ಕೊರೋನ ಪ್ರಕರಣಗಳಿಂದ ಕಟ್ಟುನಿಟ್ಟಿನ ಎಚ್ಚರ ವಹಿಸಿರುವುದರ ಜತೆಗೆ ಭಾರತ ಸಹಿತ ಜಗತ್ತಿನ ಅನೇಕ ದೇಶಗಳು ಬ್ರಿಟನ್‍ಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News