×
Ad

ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಮುಳುಗಿ ಸಾವು

Update: 2020-12-24 19:59 IST

ಕಾಪು, ಡಿ.24: ಉದ್ಯಾವರ ಅಂಕುದ್ರು ಎಂಬಲ್ಲಿರುವ ಪಾಪನಾಶಿನಿ ಹೊಳೆಯಲ್ಲಿ ಎಂದಿನಂತೆ ಕಪ್ಪೆಚಿಪ್ಪು ಹೆಕ್ಕಲು ಹೋದ ಅಂಕುದ್ರಿನ ಲಕ್ಷ್ಮಣ ಪೂಜಾರಿ (52) ಎಂಬವರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.

ಲಕ್ಷ್ಮಣ ಪೂಜಾರಿ ಅವರು ಪ್ರತಿನಿತ್ಯದಂತೆ ಬುಧವಾರವೂ ಅಪರಾಹ್ನ 2:00 ಗಂಟೆಗೆ ಪಾಪನಾಶಿನಿ ಹೊಳೆಯಿಂದ ಕಪ್ಪೆಚಿಪ್ಪು (ಮರುವಾಯಿ) ಹೆಕ್ಕಲೆಂದು ತೆರಳಿದ್ದರು. ಆದರೆ ಸಂಜೆ ಆರು ಗಂಟೆಯಾದರೂ ಮನೆಗೆ ಮರಳಿ ಬಾರದ್ದರಿಂದ ಮಕ್ಕಳು ಹಾಗೂ ನೆರೆಕೆರೆಯವರು ಪಾಪನಾಶಿನಿ ನದಿ ದಡದಲ್ಲಿ ಹುಡುಕಾಡಿದಾಗ ಸಂಜೆ 6:30ರ ಸುಮಾರಿಗೆ ಅಂಕುದ್ರು ರಿಚರ್ಡ್ ಮಚಾದೋ ಅವರ ತೋಟದ ಬಳಿ ಹೊಳೆಯಲ್ಲಿ ಅವರ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News