×
Ad

ಟಿಆರ್ ಪಿ ಹಗರಣ: ಬಾರ್ಕ್ ಮಾಜಿ ಸಿಇಒ ಬಂಧನ

Update: 2020-12-24 21:07 IST

ಮುಂಬೈ: ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿ ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು ಗುರುವಾರ ರೇಟಿಂಗ್ ಏಜೆನ್ಸಿ ಬಾರ್ಕ್ ನ ಮಾಜಿ ಸಿಇಒ ಪಾರ್ಥೊ ದಾಸ್ ಗುಪ್ತಾ ಅವರನ್ನುಪುಣೆ ಜಿಲ್ಲೆಯಿಂದ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಟಿವಿ ಚಾನೆಲ್ ಗಳು ಟಿವಿ ರೇಟಿಂಗ್ ಪಾಯಿಂಟ್ಸ್ (ಟಿಆರ್ ಪಿ)ತಿರುಚುತ್ತಿರುವ ಅರೋಪಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ 15ನೇ ಆರೋಪಿ ದಾಸ್ ಗುಪ್ತಾ.

ಪುಣೆ ಜಿಲ್ಲೆಯ ರಾಜ್ ಗಡ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಗುಪ್ತಾನನ್ನು ಅಪರಾಧ ಗುಪ್ತಚರ ಘಟಕ(ಸಿಐಯು)ಬಂಧಿಸಿದೆ. ಗುಪ್ತಾನನ್ನು ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಇಯು ಈ ಹಿಂದೆ ಬಾರ್ಕ್ ನ ಮಾಜಿ ಸಿಒಒ ರಮಿಲ್ ರಾಮ್ ಗರಿಯಾ ಸಹಿತ ಹಲವರನ್ನು ಬಂಧಿಸಿತ್ತು.

ಕೆಲವು ಚಾನೆಲ್ ಗಳು ಟಿಆರ್ ಪಿಯಲ್ಲಿ ಗೋಲ್ ಮಾಲ್ ಮಾಡುತ್ತಿವೆ  ಎಂದು ರೇಟಿಂಗ್ ಏಜೆನ್ಸಿ ಬಾರ್ಕ್ ದೂರು ದಾಖಲಿಸಿದ ಬಳಿಕ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News