ಆರ್ಥಿಕ ಮುಗ್ಗಟ್ಟು: ನೇಣುಬಿಗಿದು ಆತ್ಮಹತ್ಯೆ
Update: 2020-12-24 21:29 IST
ಉಡುಪಿ, ಡಿ.24: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಪುತ್ತೂರು ಗ್ರಾಮ ನಾರಾಯಣ ನಗರದ ಲೇಔಟ್ ನಿವಾಸಿ ಕೃಷ್ಣ ಪ್ರಭು (53) ಎಂಬವರು ಇಂದು ಬೆಳಗಿನ ಜಾವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಕೃಷ್ಣಾ ಕೃಪಾ’ ನಿವಾಸದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದ ಕೃಷ್ಣ ಪ್ರಭು, ಮಧ್ಯರಾತಿ 12 ರಿಂದ ಇಂದು ಬೆಳಗ್ಗೆ 6:30ರ ನಡುವಿನ ಅವಧಿಯಲ್ಲಿ ಮಲಗುವ ಕೋಣೆಯ ಸೀಲಿಂಗ್‌ಫ್ಯಾನ್‌ಗೆ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.