×
Ad

ಶಕ್ತಿ ವಸತಿ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆ

Update: 2020-12-24 22:41 IST

ಮಂಗಳೂರು, ಡಿ.24: ಕ್ರಿಸ್‌ಮಸ್ ದಿನಾಚರಣೆ ಪ್ರಯುಕ್ತ ನಗರದ ಶಕ್ತಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕ್ರಿಸ್‌ಮಸ್ ಟ್ರೀ, ಕ್ರಿಸ್‌ಮಸ್ ಗ್ರೀಟಿಂಗ್ಸ್, ಕ್ರಿಸ್‌ಮಸ್ ಸ್ಟಾರ್ ತಯಾರಿಕೆ, ಚಿತ್ರಕಲೆ ಹಾಗೂ ಕ್ರಿಸ್‌ಮಸ್ ಸಂತನಂತೆ ಉಡುಪು ಧರಿಸಿ ನರ್ತಿಸುವ ಸ್ಪರ್ಧೆ ಏರ್ಪಡಿಸಲಾಯಿತು.

ಪ್ರಸ್ತುತ ದಿನದ ಒತ್ತಡದಿಂದ ಶಾಲೆಯ ವಾತಾವರಣ ಮನೋರಂಜನೆಯಿಂದ ವಂಚಿತರಾದ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸಂಸ್ಥೆಯು ಆನ್‌ಲೈನ್ ತರಗತಿಯ ಮೂಲಕ ಶಿಕ್ಷಣವನ್ನು ನೀಡುವುದರ ಜೊತೆಗೆ ಹಲವು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದ್ದು, ರಾಷ್ಟ್ರೀಯ ಹಬ್ಬಗಳ ಸಂದರ್ಭ ಬಗೆ ಬಗೆಯ ಸ್ಪರ್ಧೆಯನ್ನು ಏರ್ಪಡಿಸಿತ್ತು.

ಅಲ್ಲದೆ, ಪ್ರತೀ ವರ್ಷದಂತೆ ‘ಶಕ್ತಿ ಸಿರಿ, ಶಕ್ತಿ ಶ್ರೀ’ ಎಂಬ ಸ್ಪರ್ಧೆ ಏರ್ಪಡಿಸಿ ಸುಂದರವಾದ ಉಡುಪು, ಅಲಂಕಾರದೊಂದಿಗೆ ರ್ಯಾಂಪ್ ವಾಕ್ ಮಾಡಿ ಉತ್ತಮ ಪ್ರದರ್ಶನ ನೀಡಿದ ಇಬ್ಬರು ವಿದ್ಯಾರ್ಥಿಗಳನ್ನು ‘ಶಕ್ತಿ ಸಿರಿ ಮತ್ತು ಶಕ್ತಿ ಶ್ರೀ’ ಎಂದು ಆಯ್ಕೆ ಮಾಡಲಾಗಿದೆ. ಜೂನಿಯರ್ ವಿಭಾಗದಲ್ಲಿ ಸಜಿನಿ ಆಚಾರ್ಯ ಹಾಗೂ ಹೃದಿಕ್ ವಿನಯ್ ಮತ್ತು ಸೀನಿಯರ್ ವಿಭಾಗದಲ್ಲಿ ಮರಿಯಮ್ ಅನ್ಸುಂ ಮತ್ತು ತನ್ಮಯ್ ಪೂಜಾರಿ ಆಯ್ಕೆಯಾಗಿದ್ದಾರೆ.

ಅದೇ ರೀತಿ ವಿದ್ಯಾರ್ಥಿಗಳಿಗೆ ಶಾಲೆ ಹಾಗೂ ಶಾಲೆಯ ಕೊಠಡಿಗಳನ್ನು ಹೊರತುಪಡಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಗಳನ್ನು ತೊಡಗಿಸಿಕೊಳ್ಳುವ ಮೂಲಕ ಮನೆಯಲ್ಲಿಯೇ ಶಾಲೆಯ ವಾತಾವರಣ ಕಲ್ಪಿಸಿ ಕೊಡುವಲ್ಲಿ ಶಕ್ತಿ ವಸತಿ ಶಾಲೆಯು ಯಶಸ್ವಿಯಾಗಿದೆ.
 ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News