ಪತ್ರಕರ್ತ ಆರ್.ಬಿ. ಜಗದೀಶ್, ಸುರೇಂದ್ರ, ರೇಷ್ಮಾ ಸಾಹಿತ ಸಾಧಕರಿಗೆ ಚೈತನ್ಯ ಶ್ರೀ ಪ್ರಶಸ್ತಿ
ಕಾರ್ಕಳ : ಪತ್ರಕರ್ತ ಹಾಗೂ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್, ರಂಗಕರ್ಮಿ ಸುರೇಂದ್ರ ಮೋಹನ್ ಮುದ್ರಾಡಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಗೊರೂರು ಘಟಕದ ಸಂಚಾಲಕಿ ರೇಷ್ಮಾಶೆಟ್ಟಿ, ಬಾಲ ಕಲಾವಿದೆ ನ್ಯಾಶನಲ್ ಟ್ಯಾಲೆಂಟ್‍ಡ್ ಡ್ಯಾನ್ಸರ್ ಗೌರವಕ್ಕೆ ಪಾತ್ರರಾಗಿರುವ ಶೃಜನ್ಯ ಜೆ.ಕೋಟ್ಯಾನ್ ಸಹಿತ ಸಾಧಕರಿಗೆ ಡಿ. 27ರಂದು ಬೆಳಿಗ್ಗೆ 10-30ಕ್ಕೆ ಮಂಗಳೂರು ನಂತೂರಿನ ಸಂದೇಶ ಸಂಸ್ಕøತಿ ಮತ್ತು ಶಿಕ್ಷಣ ಪ್ರತಿಷ್ಠಾನ(ರಿ) ಸಭಾಂಗಣದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರದಾನಿಸುವರು.
ಕಥಾಬಿಂಧು ಪ್ರಕಾಶನ , ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತು, ಸಂದೇಶ ಸಂಸ್ಕøತಿ ಮತ್ತು ಶಿಕ್ಷಣ ಶಿಕ್ಷಣ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿ ರುವ ಸಾಹಿತ್ಯೋತ್ಸವದಲ್ಲಿ ಈ ಗೌರವ ನೀಡಲಾಗುತ್ತಿದೆ.ಪುಸಕ್ತ ಬಿಡುಗಡೆ, ಕವಿಗೋಷ್ಠಿ, ಆಡಿಯೋಬುಕ್ ಬಿಡುಗಡೆ, ಪ್ರತಿಭಾಪ್ರದರ್ಶನ ವೃತ್ಯ ಸಹಿತ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ವಿವಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.