×
Ad

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಕಿಸ್ಮಸ್ ಆಚರಣೆ

Update: 2020-12-25 19:54 IST

ಉಡುಪಿ, ಡಿ.25: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಐಕಪ್ ವಿಭಾಗದ ವತಿಯಿಂದ ಗುರುವಾರ ಕ್ರಿಸ್‌ಮಸ್ ಹಬ್ಬವನ್ನು ಗುರುವಾರ ಆಚರಿಸ ಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕ ಅತೀ ವಂ. ಪಾದರ್ ವೆಲೆರಿಯನ್ ಮೆಂಡೋನ್ಸಾ ಮಾತನಾಡಿ, ಯೇಸು ದೇವರು ಪ್ರಪಂಚಕ್ಕೆ ಬೆಳಕಾಗಿ ಬಂದವರು. ಕಾಣದ ದೇವರ ಬದಲಿಗೆ ಪ್ರಪಂಚಕ್ಕೆ ಕಾಣುವ ದೇವರಾಗಿ ಬಂದವರು. ವಿಶ್ವದ ಪರಮ ತತ್ವವಾದ ಅಹಿಂಸೆ, ಸತ್ಯ, ಪ್ರೀತಿ, ಮತ್ತು ಕ್ಷಮೆಯನ್ನು ಮೈಗೂಡಿಸಿಕೊಳ್ಳುವಂತೆ ಏಸುದೇವರು ಪ್ರಪಂಚಕ್ಕೆ ಸಂದೇಶವನ್ನು ನೀಡಿದ್ದರು ಎಂದರು.

ಕಾಲೇಜಿನ ನಿವೃತ್ತ ಉಪನ್ಯಾಸಕಿ ಪ್ರೊ.ಹಿಲ್ಡಾ ರೋಡ್ರಿಗಸ್,ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜೋಸೆಪ್ ಪೀಟರ್ ಪೆರ್ನಾಂಡಿಸ್, ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸವಿತಾ ಕುಮಾರಿ ಕೆ., ಐಕ್ಯೂಎಸಿ ಸಂಚಾಲಕ ಡಾ ಜಯರಾಮ್ ಶೆಟ್ಟಿಗಾರ್, ಐಕಪ್ ವಿಭಾಗದ ಮುಖ್ಯಸ್ಥ ಫಾ. ಡಾ.ಪ್ರಕಾಶ್ ಅನಿಲ್ ಕ್ಯಾಸ್ತೆಲಿನೋ, ಪಾಯ್ಲೀಸಾ ಡಿಸೋಜ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಅಳ್ವ ಸ್ವಾಗತಿಸಿದರು. ಅಮೃತಾ ವಂದಿಸಿದರು. ನಿಶಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News