ನಮ್ಮಲ್ಲಿ ಪತ್ತೆಯಾದ ವೈರಸ್ ಬ್ರಿಟನ್ ನಷ್ಟು ಅಪಾಯಕಾರಿಯಲ್ಲ : ದಕ್ಷಿಣ ಆಫ್ರಿಕ

Update: 2020-12-25 15:12 GMT

ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಡಿ. 25: ದಕ್ಷಿಣ ಆಫ್ರಿಕದಲ್ಲಿ ಪತ್ತೆಯಾಗಿರುವ ಕೊರೋನ ವೈರಸ್‌ನ ರೂಪಾಂತರಿಕ ಪ್ರಭೇದವು ಬ್ರಿಟನ್‌ನಲ್ಲಿ ಪತ್ತೆಯಾಗಿರುವ ರೂಪಾಂತರಿತ ಪ್ರಭೇದಕ್ಕಿಂತ ಹೆಚ್ಚು ಸಾಂಕ್ರಾಮಿಕ ಅಥವಾ ಅಪಾಯಕಾರಿ ಎಂಬ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್‌ರ ವಾದವನ್ನು ದಕ್ಷಿಣ ಆಫ್ರಿಕದ ಆರೋಗ್ಯ ಸಚಿವ ಝ್ವೆಲಿ ಮೆಖೈಜ್ ನಿರಾಕರಿಸಿದ್ದಾರೆ.

‘‘ದಕ್ಷಿಣ ಆಫ್ರಿಕದಲ್ಲಿ ಪತ್ತೆಯಾಗಿರುವ ಕೊರೋನ ವೈರಸ್ ಪ್ರಭೇದವು ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಪ್ರಭೇದಕ್ಕಿಂತ ಹೆಚ್ಚು ಸಾಂಕ್ರಾಮಿಕ ಎನ್ನಲು ಈಗಿನ ಮಟ್ಟಿಗೆ ಯಾವುದೇ ಪುರಾವೆಯಿಲ್ಲ’’ ಗುರುವಾರ ಹೊರಡಿಸಿದ ಹೇಳಿಕೆಯೊಂದರಲ್ಲಿ ಝ್ವೆಲಿ ಮೆಖೈಝ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News