×
Ad

ಕೊರೋನ ವೈರಸ್ ; ದ.ಕ. ಜಿಲ್ಲೆಗೆ ಆಗಮಿಸಿದ ಎಲ್ಲ ಪ್ರಯಾಣಿಕರು ಸುರಕ್ಷಿತ : ಡಾ.ರಾಮಚಂದ್ರ ಬಾಯರಿ

Update: 2020-12-25 20:53 IST

ಮಂಗಳೂರು, ಡಿ.25: ರೂಪಾಂತರ ಕೊರೋನ ವೈರಸ್ ಭೀತಿಯಲ್ಲಿದ್ದ ಇಂಗ್ಲೆಂಡ್‌ನಿಂದ ಮಂಗಳೂರಿಗೆ ಆಗಮಿಸಿದವರ ಪೈಕಿ ಎಂಟು ಮಂದಿಯ ಕೋವಿಡ್ ಟೆಸ್ಟ್ ಶುಕ್ರವಾರ ನೆಗೆಟಿವ್ ಬಂದಿದೆ. ಇದರೊಂದಿಗೆ ಇಂಗ್ಲೆಂಡ್‌ನಿಂದ ಮಂಗಳೂರಿಗೆ ಇದುವರೆಗೆ ಬಂದ ಎಲ್ಲ 66 ಮಂದಿಯ ಆರೋಗ್ಯ ಸುರಕ್ಷಿತವಾಗಿದ್ದು, ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಡಿ.7ರಿಂದ ಇಲ್ಲಿವರೆಗೆ ಒಟ್ಟು 66 ಮಂದಿ ಇಂಗ್ಲೆಂಡ್‌ನಿಂದ ಮಂಗಳೂರಿಗೆ ಆಗಮಿಸಿದ್ದರು. ಇವರಲ್ಲಿ ಮೂರು ಮಂದಿ ಇಂಗ್ಲೆಂಡ್‌ಗೆ ವಾಪಸ್ ಹೋಗಿ ದ್ದರೆ, ಉಳಿದವರು ಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಇದ್ದರು. ಪ್ರಥಮ ಹಂತದಲ್ಲಿ ಈ ಎಂಟು ಮಂದಿ ಹೊರತುಪಡಿಸಿ ಬೇರೆಲ್ಲರ ಕೋವಿಡ್ ಟೆಸ್ಟ್ ಮಾಡಲಾಗಿತ್ತು, ಅದು ನೆಗೆಟಿವ್ ಬಂದಿತ್ತು. ಇದೀಗ ಬಾಕಿಯುಳಿದ ಎಂಟು ಮಂದಿಯ ಕೋವಿಡ್ ಟೆಸ್ಟ್ ಕೂಡ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News