×
Ad

ಪಂದುಬೆಟ್ಟು: 3 ಮನೆಗಳಿಗೆ ಸೋಲಾರ್ ದೀಪ ಅಳವಡಿಕೆ

Update: 2020-12-25 22:06 IST

ಉಡುಪಿ, ಡಿ.25: ಉಡುಪಿ ರೋಟರಿ ಮತ್ತು ಉಡುಪಿ ಚೈಲ್ಡ್‌ಲೈನ್ ವತಿಯಿಂದ ಕರ್ಣಾಟಕ ಬ್ಯಾಂಕ್ ಮಂಗಳೂರು ಕೇಂದ್ರ ಕಚೇರಿ ಸಹಭಾಗಿತ್ವದಲ್ಲಿ ಪ್ರಾಯೋಜಿಸಿದ್ದ ಸೆಲ್ಕೋ ಸಹಕಾರದೊಂದಿಗೆ ಸೋಲಾರ್ ಮನೆ ಬೆಳಕು ಯೋಜನೆಯಡಿ ಆದಿಉಡುಪಿ ಪಂದುಬೆಟ್ಟು ಲೇಬರ್ ಕಾಲನಿಯ 3 ಮನೆಗಳಿಗೆ ಸೋಲಾ್ ದೀಪವನ್ನು ಒದಗಿಸಲಾಯಿತು.

ಸೋಲಾರ್ ದೀಪಗಳನ್ನು ಉದ್ಘಾಟಿಸಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಮಾತನಾಡಿ, 2022ರ ವೇಳೆ ಉಡುಪಿ ನಗರದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಗಳೇ ಇರಬಾರದೆಂಬ ಸಂಕಲ್ಪ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಆಸರೆ ಟ್ರಸ್ಟ್‌ನಿಂದ 60ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಮತ್ತು 7 ಮನೆಗಳಿಗೆ ಸೋಲಾರ್ ಅಳವಡಿಸಲಾಗಿದೆ ಎಂದರು.

ಚೈಲ್ಡ್‌ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಮಾತನಾಡಿ, ಪಂದುಬೆಟ್ಟು ಲೇಬರ್ ಕಾಲೋನಿಯಲ್ಲಿ 19 ಮನೆಗಳಿದ್ದು, 8 ಮನೆಗಳಿಗೆ ಹಕ್ಕು ಪತ್ರ ಸಿಕ್ಕಿದೆ. ಕಲಿಯುವ ಮಕ್ಕಳಿರುವ ಮನೆಗಳನ್ನು ಗುರುತಿಸಿ 3 ಸೋಲಾರ್ ದೀಪ ಗಳನ್ನು ಒದಗಿಸಲಾಗಿದೆ. ಕೆಲವೊಂದು ಮನೆಯಲ್ಲಿ ಸಣ್ಣ ದೀಪದ ವ್ಯವಸ್ಥೆ ಗಳಿದ್ದು, ಇನ್ನುಳಿದ 7 ಮನೆಗಳಿಗೆ ಯಾವುದೇ ೌಲಭ್ಯ ಕೂಡಾ ಇಲ್ಲ ಎಂದು ತಿಳಿಸಿದರು.

ರೋಟರಿ ಉಡುಪಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ದೀಪಾ ಭಂಡಾರಿ, ಸೆಲ್ಕೋ ಸೋಲಾರ್ ಸುಬ್ರಹ್ಮಣ್ಯ, ರೋಟರಿ ಬಿ.ವಿ. ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News