ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಹಮೀದ್ ಖಂದಕ್ ಆಯ್ಕೆ
Update: 2020-12-25 23:18 IST
ವಿಟ್ಲ : ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಹಮೀದ್ ಖಂದಕ್ ಆಯ್ಕೆಯಾಗಿದ್ದಾರೆ.
ಮಸೀದಿಯ ಗೌರವಾಧ್ಯಕ್ಷ ಮೌಲಾನ ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ನಡಡೆಯಿತು. ಮಿತ್ತೂರು ಜುಮಾ ಮಸೀದಿಯ ಖತೀಬ್ ಆಸಿಫ್ ಅಝ್ಹರಿ ದುಆ ನೆರವೇರಿಸಿದರು. ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಹಮೀದ್ ಖಂದಕ್ ಮಂಡಿಸಿದರು. 2020 - 21 ನೇ ಸಾಲಿಗೆ ಸದಸ್ಯರನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಹಮೀದ್ ಖಂದಕ್, ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಅಸ್ಬಾರ್ಕ್, ಆದಂ ಎಂ.ಎಂ.ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಿ ಖಾಸಿಂ ಹಾಜಿ, ಜೊತೆ ಕಾರ್ಯದರ್ಶಿಯಾಗಿ ಹಂಝ ಬಿ.ಎಸ್, ಕೊಶಾಧಿಕಾರಿಯಾಗಿ ಹಾಜಿ ಹಮೀದ್ ಅಲಿ, ಲೆಕ್ಕ ಪರಿಶೊಧಕರಾಗಿ ಕೆ.ಬಿ ಸಿರಾಜುದ್ದೀನ್ ಆಯ್ಕೆಯಾದರು. 19 ಮಂದಿ ಸದಸ್ಯರನ್ನು ಸೇರಿಸಲಾಯಿತು.