2028ರಲ್ಲಿ ಅಮೆರಿಕಾವನ್ನು ಹಿಂದಿಕ್ಕಿ ವಿಶ್ವದ ಅತಿ ದೊಡ್ಡ ಆರ್ಥಿಕತೆಯಾಗಲಿರುವ ಚೀನಾ : ವರದಿ

Update: 2020-12-26 09:53 GMT

ಲಂಡನ್,ಡಿ.26: ಅಮೆರಿಕಾವನ್ನು ಹಿಂದಿಕ್ಕಿ 2028ರಲ್ಲಿ ಚೀನಾ ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಎಂದು ಸೆಂಟರ್ ಫಾರ್ ಇಕನಾಮಿಕ್ಸ್ ಎಂಡ್ ಬಿಸಿನೆಸ್ ರಿಸರ್ಚ್ ಶನಿವಾರ ಪ್ರಕಟಗೊಂಡ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಚೀನಾ ಅತಿ ದೊಡ್ಡ ಆರ್ಥಿಕತೆಯಾಗಬಹುದೆಂಬ ನಿರೀಕ್ಷೆ ಈ ಹಿಂದೆ ಇತ್ತಾದರೂ ಐದು ವರ್ಷ ಮುಂಚಿತವಾಗಿಯೇ ಈ ಗುರಿ ತಲುಪುವ ನಿರೀಕ್ಷೆಯಿದೆ. ಕೋವಿಡ್ ಸಾಂಕ್ರಾಮಿಕದಿಂದ ಎರಡೂ ದೇಶಗಳ ಚೇತರಿಕೆ ಪ್ರಮಾಣದಲ್ಲಿರುವ ವೈರುದ್ಯದಿಂದ ಹೀಗಾಗಿದೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

"ಸಾಂಕ್ರಾಮಿಕವನ್ನು ಚೀನಾ ಜಾಣತನದಿಂದ ನಿರ್ವಹಣೆ ಮಾಡಿರುವುದು ಹಾಗೂ ಅದರ ದೀರ್ಘಕಾಲಿಕ ಬೆಳವಣಿಗೆಯಿಂದ  ಅದರ ಆರ್ಥಿಕ ನಿರ್ವಹಣೆಯೂ ಉತ್ತಮಗೊಂಡಿದೆ," ಎಂದು ವರದಿ ಹೇಳಿದೆ.

2021-25 ನಂತರ ಚೀನಾದ ಸರಾಸರಿ ಆರ್ಥಿಕ ಪ್ರಗತಿ ವಾರ್ಷಿಕ ಶೇ 5.7ರಷ್ಟು ಏರಿಕೆಯಾಗಲಿದ್ದರೆ 2026-30 ನಂತರ ವಾರ್ಷಿಕ ಪ್ರಗತಿ ದರ ಶೇ 4.5ಕ್ಕೆ ಇಳಿಕೆಯಾಗಲಿದೆ.

ಅತ್ತ ಅಮೆರಿಕಾದ ಆರ್ಥಿಕತೆ 2021ರಲ್ಲಿ ಪುಟಿದೆದ್ದಿದ್ದರೆ, 2022 ಹಾಗೂ 2024ರ ನಡುವೆ ಪ್ರಗತಿ ದರ ವಾರ್ಷಿಕ ಶೇ 1.9ರಷ್ಟು ಕುಂಠಿತವಾಗಲಿದ್ದು ನಂತರದ ವರ್ಷಗಳಲ್ಲಿ ಇದು ಶೇ 1.6ರಷ್ಟು ಕುಂಠಿತವಾಗಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News