ಕತರ್ : ಕೆ.ಎಂ.ಶರೀಫ್ ನಿಧನಕ್ಕೆ ಐಎಫ್ಎಫ್ ಸಂತಾಪ

Update: 2020-12-26 09:45 GMT

ದೋಹ : ಅನೇಕ ದಶಕಗಳ ಕಾಲ ಶೋಷಿತ, ದಲಿತ ಹಾಗೂ ದಮನಿತ ವರ್ಗಗಳನ್ನು ಶೋಷಿಸುತ್ತಿದ್ದವರ ವಿರುದ್ಧ ಧ್ವನಿಯಾಗಿದ್ದು, ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಅತ್ಯಾಚಾರ ಮತ್ತು ಮಾದಕ ದ್ರವ್ಯಗಳಿಂದ ಜನರನ್ನು ಮುಕ್ತರನ್ನಾಗಿಸುವ ಕನಸನ್ನು ಕಾಣುತ್ತಾ, ಸಾಮಾಜಿಕ ಬದಲಾವಣೆಗೆ ಬೇಕಾದ ಪ್ರಯತ್ನವನ್ನು ಸರ್ವರೀತಿಯಲ್ಲಿ ಮಾಡುತ್ತಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕರಾದ 
ಕೆ. ಎಂ.ಶರೀಫ್ ನಿಧನ ಸಮಾಜಕ್ಕೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಇಂಡಿಯಾ ಫ್ರೆಟರ್ನಿಟಿ ಫೋರಂ  ಕತರ್ ಸಂತಾಪ ವ್ಯಕ್ತಪಡಿಸಿದೆ.

ಅತ್ಯಂತ ಸುಸಂಸ್ಕೃತ ಕುಟುಂಬದಲ್ಲಿ ಹುಟ್ಟಿದ ಶರೀಫ್ ಅವರು, ಗುರುಗಳಾದ ತಮ್ಮ ತಂದೆಯಿಂದ ಉನ್ನತವಾದ ನೀತಿ ಮತ್ತು ನ್ಯಾಯವನ್ನು ಕಲಿತು, ತನ್ನ ಬಾಲ್ಯ ಕಾಲದಲ್ಲಿಯೇ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಕೆಲಸಗಳನ್ನು ಮಾಡಿಕೊಂಡು, ಜನಪರವಾದಂತಹ ನಿಲುವನ್ನು ಹೊಂದಿದ್ದರು. ಜನಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರ ಅಗಲಿಕೆಯು ಅತ್ಯಂತ ದೊಡ್ಡ ನಷ್ಟವೇ ಆಗಿದೆ.

ರಾಜ್ಯಮಟ್ಟದಲ್ಲಿ ಶೋಷಿತ ಹಾಗೂ ದಮನಿತ ವರ್ಗಕ್ಕಾಗಿ ಸತತವಾಗಿ ಯೋಜನೆಗಳನ್ನು ಹಾಕಿಕೊಂಡು, ಕೆಲಸ ಮಾಡಿಕೊಂಡು ಬಂದಂತಹ ಅತ್ಯಂತ ಪ್ರಭಾವಶಾಲಿ, ಧೀಮಂತ ವ್ಯಕ್ತಿ. ತಮ್ಮ ಜೀವನಕಾಲದಲ್ಲಿ ರಾಷ್ಟ್ರೀಯ ಮಟ್ಟದಲ್ಲೂ ಸಹ ಉದಯೋನ್ಮುಖರಾಗಿ ಸಮಾಜ ಸೇವೆ ಮಾಡಿಕೊಂಡು, ಕರ್ನಾಟಕವನ್ನು ಮಾತ್ರವಲ್ಲ, ದೇಶಕ್ಕೂ ಸಹ ಅತಿ ಉನ್ನತವಾದ ಕೊಡುಗೆಗಳನ್ನು ನೀಡಲು ಶರೀಫ್ ಅವರಿಗೆ ಸಾಧ್ಯವಾಗಿದೆ ಎಂದು ಐಎಫ್ಎಫ್ ಕತರ್ ಪ್ರಕಟಣೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News