×
Ad

ಎಸ್ಸೆಸ್ಸೆಫ್ ಮಣಿಪಾಲ ಸೆಕ್ಟರ್ ವಾರ್ಷಿಕ ಮಹಾಸಭೆ

Update: 2020-12-26 17:31 IST

ಉಡುಪಿ, ಡಿ.26: ಎಸ್ಸೆಸ್ಸೆಫ್ ಮಣಿಪಾಲ ಸೆಕ್ಟರ್ ಇದರ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಮಿತಿ ರಚನೆಯು ಇತ್ತೀಚೆಗೆ ಸೆಕ್ಟರ್ ಅಧ್ಯಕ್ಷ ಸಮೀರ್ ಮಿಸ್ಬಾಹಿ ನೇಜಾರ್ ಅಧ್ಯಕ್ಷತೆಯಲ್ಲಿ ಅಂಬಾಗಿಲಿನಲ್ಲಿರುವ ಡಿವಿಷನ್ ಕಚೇರಿ ಯಲ್ಲಿ ಜರಗಿತು.

ಉಡುಪಿ ಡಿವಿಷನ್ ಅಧ್ಯಕ್ಷ ಸೈಯ್ಯದ್ ಯೂಸುಫ್ ತಂಙಳ್ ಹೂಡೆ ದುವಾ ನೆರವೇರಿಸಿದರು. ಸಭೆಯನ್ನು ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಅಬ್ದುರ್ರರಾಕ್ ಉಸ್ತಾದ್ ಅಂಬಾಗಿಲು ಉದ್ಘಾಟಿಸಿದರು.

2020-21ರ ಸಾಲಿನ ನೂತನ ಸಮಿತಿ ಅಧ್ಯಕ್ಷರಾಗಿ ಸೈಯ್ಯದ್ ಅಸ್ರಾರ್ ತಂಙಲ್ ಹೂಡೆ, ಪ್ರಧಾನ ಕಾರ್ಯದರ್ಶಿಯಾಗಿ ರಾಝಿಕ್ ದೊಡ್ಡಣಗುಡ್ಡೆ, ಕೋಶಾಧಿಕಾರಿಯಾಗಿ ಸಮೀರ್ ಮಿಸ್ಬಾಹಿ ನೇಜಾರ್, ಉಪಾಧ್ಯಕ್ಷರುಗಳಾಗಿ ಸಿದ್ದೀಕ್ ಸಂತೊಷನಗರ, ಸರ್ಫರಾಝ್ ಮಲ್ಪೆ, ಕಾರ್ಯದರ್ಶಿಯಾಗಿ ಅಫ್ನಾನ್ ಮಲ್ಪೆ, ಅಯಾನ್ ಹೂಡೆ, ಅನ್ಸಾರ್ ಸಂತೊಷನಗರ, ಸಿಮಾಕ್ ಸಂತೊಷನಗರ, ಅಬ್ದುಲ್ ಕಯ್ಯೂಮ್ ಮಲ್ಪೆ, ನವಾಝ್ ಉಡುಪಿ ಮತ್ತು ಕಾರ್ಯಕಾರಿ ಸದಸ್ಯರು, ಉಡುಪಿ ಡಿವಿಷನ್ ಕೌನ್ಸಿಲರ್ಗಳನ್ನು ಆಯ್ಕೆ ಮಾಡ ಲಾಯಿತು.

ಸೆಕ್ಟರ್ ಜೊತೆ ಕಾರ್ಯದರ್ಶಿ ರಾಝಿಕ್ ದೊಡ್ಡಣಗುಡ್ಡೆ ಸ್ವಾಗತಿಸಿ, ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ, ಮಜೀದ್ ಕಟಪಾಡಿ ಹಾಗೂ ನಝೀರ್ ಸಾಸ್ತಾನ ಉಪಸ್ಥಿತರಿದ್ದರು. ಮೇಲ್ಘಟಕದ ವೀಕ್ಷರಾಗಿ ಡಿವಿಷನ್ ಕಾರ್ಯದರ್ಶಿ ಇಬ್ರಾಹಿಂ ರಂಗನಕೆರೆ ನೂತನ ಸಮಿತಿಗೆ ಚಾಲನೆ ನೀಡಿದರು. ಜೊತೆ-ಕಾರ್ಯದರ್ಶಿ ಅ್ನಾನ್ ಮಲ್ಪೆವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News