ಕ್ರಿಸ್ಮಸ್ ಸ್ಟಾರ್ ಸ್ಪರ್ಧೆಯಲ್ಲಿ ಪ್ರಶಸ್ತಿ
Update: 2020-12-26 20:44 IST
ಮಂಗಳೂರು, ಡಿ.26: ನಗರದ ಬೊಂದೇಲ್‌ನಲ್ಲಿರುವ ಸಂತ ಲಾರೆನ್ಸ್ ಚರ್ಚ್‌ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ಮಸ್ ನಕ್ಷತ್ರ ಮಾಡುವ ಸ್ಪರ್ಧೆಯಲ್ಲಿ ಹೋಲಿ ಕ್ರಿನಿಟಿ ವಾರ್ಡ್ ಕೊರಂಟಾಡಿ ದ್ವಿತೀಯ ಬಹುಮಾನ ಪಡೆಯಿತು.
ಸ್ಪರ್ಧೆಯ್ಲಿ 10 ಕ್ರಿಸ್ಮಸ್ ನಕ್ಷತ್ರ ತಂಡವು ಭಾಗವಹಿಸಿದ್ದವು. ಅತ್ಯಂತ ಆಕರ್ಷಕದಿಂದ ಕೂಡಿದ ಸಂಪೂರ್ಣವಾಗಿ ಹಾಲಿನ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಪೇಪರ್ ಮೂಲಕ ರಚಿಸಲಾದ ಈ ನಕ್ಷತ್ರದ ಒಳಭಾಗದಲ್ಲಿ ಗೋದಳಿ ಪ್ರತಿಕೃತಿ ಮಾಡಿ ಏಸುವಿನ ಜನನದ ಕಲ್ಪನೆಯಲ್ಲಿ ರೂಪಿಸಲಾಗಿದೆ.