ಉಚಿತ ಆರೋಗ್ಯ ತಪಾಸಣಾ ಶಿಬಿರ
Update: 2020-12-26 20:45 IST
ಮಂಗಳೂರು, ಡಿ.26: ಡಿವೈಎಫ್‌ಐ ಉರ್ವಸ್ಟೋರ್ ಘಟಕದ ವತಿಯಿಂದ ಕಸಬಾ ಬೆಂಗರೆ ಪ್ರಾಥಮಿಕ ಆರೊಗ್ಯ ಕೇಂದ್ರದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಶನಿವಾರ ಉರ್ವಸ್ಟೋರ್ ಸುಂಕದಕಟ್ಟೆಯಲ್ಲಿ ನಡೆಯಿತು.
ಯೆನೆಪೊಯ ಆಸ್ಪತ್ರೆಯ ವೈದ್ಯರುಗಳಾದ ಡಾ ಶುಭಾಕರ್, ಡಾ. ಕಾಜಲ್, ಡಾ. ರಮೇಶ್, ಡಾ. ಅರ್ಜುನ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ವಿದ್ಯಾಶ್ರೀ, ಲೋಲಾಕ್ಷಿ , ಆಶಾ ಕಾರ್ಯಕರ್ತೆ ಕುಸುಮಾ, ಡಿವೈಎಫ್‌ಐ ಉರ್ವಸ್ಟೋರ್ ಘಟಕದ ಅಧ್ಯಕ್ಷ ಪ್ರಶಾಂತ್ ಎಂಬಿ , ಮನೋಜ್, ನಾಗರಾಜ್, ರಹೀಮ್, ಹರಿಣಾಕ್ಷಿ ಎಂಬಿ ಉಪಸ್ಥಿತರಿದ್ದರು.