ಬೈಕ್ ಕಳವು
Update: 2020-12-26 21:57 IST
ಉಡುಪಿ, ಡಿ.26: ಕರಾವಳಿ ಜಂಕ್ಷನ್ ಬೈಪಾಸ ಸಮೀಪದ ಗಂಗೋತ್ರಿ ಹೊಟೇಲ್ ಪಾರ್ಕಿಂಗ್ ಸ್ಥಳದಲ್ಲಿ ಡಿ.22ರಂದು ಸಂಜೆ ನಿಲ್ಲಿಸಿದ್ದ ಕೃಷ್ಣ ಶೇರಿ ಗಾರ್ ಎಂಬವರ ಕೆಎ20 ಎಸ್ 4339 ನಂಬರಿನ ಹೀರೋ ಫ್ಯಾಶನ್ ಪ್ಲಸ್ ಬೈಕ್ ಕಳವು ಆಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.