ಎಸ್ಸೆಸ್ಸೆಫ್ ಮೀಂಪ್ರಿ ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ
ಮಂಗಳೂರು : ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಇದರ ಮೀಂಪ್ರಿ ಶಾಖೆಯ ವಾರ್ಷಿಕ ಮಹಾಸಭೆಯು ಝೈನುಲ್ ಆಬಿದ್ ತಂಙಳ್ ಕಿನ್ಯ ಅವರ ಮನೆಯಲ್ಲಿ ಶಾಖಾಧ್ಯಕ್ಷ ನೌಫಲ್ ಅಹ್ಸನಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಖಾ ಉಸ್ತುವಾರಿ ಶರೀಫ್ ಸಅದಿ ಉಧ್ಘಾಟಿಸಿದರು.
ಶಾಖೆ ಪ್ರ. ಕಾರ್ಯದರ್ಶಿ ಮೊಯ್ದಿನ್ ರವರು 2019-20 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಲೆಕ್ಕ ಪತ್ರವನ್ನು ಶಾಖಾ ಕೋಶಾಧಿಕಾರಿ ಹಸೈನಾರ್ ರವರು ಮಂಡಿಸಿದರು.
ಎಸ್ಸೆಸ್ಸೆಫ್ ಕಿನ್ಯಾ ಸೆಕ್ಟರ್ ಅಧ್ಯಕ್ಷರಾದ ಸೆಯ್ಯಿದ್ ಝೈನುಲ್ ಆಬಿದ್ ತಂಙಳ್ ಕಿನ್ಯ ತರಬೇತಿ ನೀಡಿದರು. ನೂತನ ಸಾಲಿನ ಹೊಸ ಸಮಿತಿಯನ್ನು ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಪ್ರ.ಕಾರ್ಯದರ್ಶಿ ಬಶೀರ್ ಕೂಡಾರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ನೌಫಲ್ ಅಹ್ಸನಿ, ಉಪಾಧ್ಯಕ್ಷರಾಗಿ ಮೊಯ್ದಿನ್ ಹಾಗೂ ಸಲೀಂ, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಮಹ್ಶೂಮ್, ಕೋಶಾಧಿಕಾರಿಯಾಗಿ ಹುಸೈನಾರ್, ಕಾರ್ಯದರ್ಶಿಗಳಾಗಿ ಸಫ್ವಾನ್, ಹಸೈನಾರ್, ಇಹ್ತಿಶಾಮ್, ಅನಸ್, ರವೂಫ್, ಮುಝೈಲ್ ಸಹಿತ 19 ಮಂದಿ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಎಸ್ ವೈ ಎಸ್ ಮೀಂಪ್ರಿ ಬ್ರಾಂಚ್ ಪ್ರ.ಕಾರ್ಯದರ್ಶಿ ಪಾರೂಖ್ ಸಖಾಫಿ ಸಭೆಯನ್ನುದ್ದೇಶಿಸಿ ಮಾತನಾಡಿ ಹೊಸ ಸಮಿತಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಮೊಯ್ದಿನ್ ಸ್ವಾಗತಿಸಿ, ಕೊನೆಯಲ್ಲಿ ನೂತನ ಪ್ರ.ಕಾರ್ಯದರ್ಶಿ ಮಹ್ಶೂಮ್ ವಂದಿಸಿದರು.