ಕುದ್ದುಪದವು : ಕರ್ನಾಟಕ ಸ್ಟೇಟ್ ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಘಟಕದಿಂದ ಆ್ಯಂಬುಲೆನ್ಸ್ ಲೋಕಾರ್ಪಣೆ
ಕುದ್ದುಪದವು : ಕರ್ನಾಟಕ ಸ್ಟೇಟ್ ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಘಟಕ ಸಾರಥ್ಯದಲ್ಲಿ ಗಡಿನಾಡ ಸಹಚರ ಆ್ಯಂಬುಲೆನ್ಸ್ ಸೇವೆಯನ್ನು ಶುಕ್ರವಾರ ಸಂಜೆ ಕುದ್ದುಪದವಿನಲ್ಲಿ ಲೋಕಾರ್ಪಣೆ ಗೊಳಿಸಲಾಯಿತು.
ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷರಾದ ಅಮೀರ್ ತಂಞಳ್ ಕಿನ್ಯ, ಪ್ರ. ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಿಟ್ಲ ವಲಯ ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್ ಕಡಂಬು ಸೇರಿದಂತೆ ಕೇಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ರೈ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಬಾಲಕೃಷ್ಣಸ್ ಶೆಟ್ಟಿ ಬೇಂಗ್ರೋಡಿ, ಮರಕ್ಕಿಣಿ ಮುದರ್ರಿಸ್ ನೌಫಲ್ ಹುಸೈನ್ ಫೈಝಿ, ಅಡ್ಯನಡ್ಕ ಮುದರ್ರಿಸ್ ಅಬ್ದುಲ್ಲಾ ರಹ್ಮಾನಿ, ಕುದ್ದುಪದವು ಇಮಾಮ್ ಮುನೀರ್ ಅಝ್ಹರಿ, ಶಾಹಜಾನ್ ಅಝ್ಹರಿ, ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಎಂಎಸ್ ಮಹಮ್ಮದ್, ಮರಕ್ಕಿಣಿ ಜಮಾಅತ್ ಅಧ್ಯಕ್ಷ ಶರೀಫ್ ಮೂಸಾ, ವೈದ್ಯರಾದ ರಮೇಶ್ ಕುಮಾರ್ ಬಿಳಿರಾಯ, ಗೋಪಾಲ ಪಾಟಾಳಿ, ಶ್ರೀನಿವಾಸ್ ಶೆಟ್ಟಿ ಬೇಂಗ್ರೋಡಿ, ಅಲ್ ಹುದಾ ಚಾರಿಟಿ ಫೌಂಡೇಶನ್ ಮುಚ್ಚಿರಪದವು ಇದರ ಅಧ್ಯಕ್ಷ ಶಾಫಿ ಮುಚ್ಚಿರಪದವು, ಅಬ್ದುಲ್ ರಝಾಕ್ ಸಾರಡ್ಕ, ತಾಜ್ ಗಡಿನಾಡು, ಪೊಡಿಯ ಹಾಜಿ ಮೈರ, ಕಲಂದರ್ ಮಂಜನಡ್ಕ , ಉಸ್ಮಾನ್ ಮರಕ್ಕಿಣಿ, ಮುರಳೀಧರ್ ರೈ ಕೇಪು, ಎಸ್ಕೆಎಸ್ಸೆಸ್ಸೆಫ್ ಕುದ್ದುಪದವು ಶಾಖಾಧ್ಯಕ್ಷ ಮಹಮ್ಮದ್ ಎಸ್, ಮರಕ್ಕಿಣಿ ಶಾಖಾಧ್ಯಕ್ಷ ಇಬ್ರಾಹಿಂ ಕೆದುಮೂಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಮೀರ್ ತಂಗಳ್ ಕಿನ್ಯ ಉದ್ಘಾಟಿಸಿ ದುಃವಾ ಗೈದರು. ಹನೀಫ್ ಹರಿಯಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಲವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಶ್ರೀನಿವಾಸ ರೈ ಮಾತನಾಡಿ ಕೇಪುಗ್ರಾಮ ಪಕ್ಷ-ಜಾತಿಗಿಂತ ಮಿಗಿಲಾಗಿ ಮಾನವೀಯತೆಗೆ ಹೆಚ್ಚಿನ ಆದ್ಯತೆಯನ್ನು ಕಲ್ಪಿಸಿದ ಊರಾಗಿದೆ, ನಮ್ಮ ಸಂಬಂಧ ಮಾನವೀಯ ಸಂಬಂಧ ಎಂದು ಹೇಳಿದರು.
ಎಂಎಸ್ ಮಹಮ್ಮದ್, ಅನೀಸ್ ಕೌಸರಿ ಮಾತನಾಡಿದರು. ಅಲ್ ಹುದಾ ಚಾರಿಟಿ ಫೌಂಡೇಶನ್ ಮುಚ್ಚಿರಪದವು ಹಾಗೂ ಮುಹಮ್ಮದ್ ಸೂಫಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಬದ್ರುದ್ದೀನ್ ಅಥಿತಿಗಳಿಗೆ ಸ್ವಾಗತ ಕೋರಿ, ಕರೀಮ್ ಮೂಸಾ ವಂದಿಸಿದರು.