×
Ad

ಉಡುಪಿ: ಬಿರುಸಿನ ಮತದಾನ; 3 ತಾಲೂಕುಗಳಲ್ಲಿ ಶೇ.12.48 ಹಕ್ಕು ಚಲಾವಣೆ

Update: 2020-12-27 10:19 IST

ಉಡುಪಿ, ಡಿ.27: ಎರಡನೇ ಹಂತದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ ಹಾಗೂ ಕಾಪು ತಾಲೂಕಿನ ಒಟ್ಟು 86 ಗ್ರಾಪಂಗಳ 1209 ಸ್ಥಾನಗಳಿಗೆ ಇಂದು ಬಿರುಸಿನ ಮತದಾನ ಆರಂಭಗೊಂಡಿದೆ.
 ಬೆಳಗ್ಗೆ 9 ಗಂಟೆವರೆಗೆ ಒಟ್ಟು ಶೇ.12.48 ಮತದಾನವಾಗಿದೆ. ಕಾಪು ತಾಲೂಕಿನಲ್ಲಿ ಶೇ.12.25, ಕಾರ್ಕಳ ಶೆ.13.77, ಕುಂದಾಪುರ ತಾಲೂಕಿನಲ್ಲಿ ಶೇ.12.10ರಷ್ಟು ಮತದಾನ ಆಗಿರುವ ಬಗ್ಗೆ ವರದಿಯಾಗಿದೆ.

ಕಾಪು ವರದಿ: ಕಾಪು ತಾಲೂಕಿನ 27 ಗ್ರಾಪಂಗಳ 145 ಕ್ಷೇತ್ರಗಳ 399 ಸ್ಥಾನಗಳಿಗೆ ಒಟ್ಟು 187 ಮತಗಟ್ಟೆಗಳಲ್ಲಿ ಮತದಾನ ಆರಂಭಗೊಂಡಿದ್ದು, ಹಲವೆಡೆ ಬಿರುಸಿನ ಮತದಾನವಾಗುತ್ತಿರುವುದು ವರದಿಯಾಗಿದೆ.

ಮತಪಟ್ಟಿಗೆ ಗೊಂದಲ: ಮತದಾನ ವಿಳಂಬ
ಹೆಜಮಾಡಿ ಕೋಡಿ ಶಾಲೆಯ ಮತಗಟ್ಟೆಯೊಂದರಲ್ಲಿ ಬೆಳಗ್ಗೆ ಮತಪೆಟ್ಟಿಗೆಯಲ್ಲಿ ಗೊಂದಲ ಉಂಟಾಗಿದ್ದರಿಂದ ಮತದಾನ ಅರ್ಧಗಂಟೆ ವಿಳಂಬವಾಗಿ ಆರಂಭಗೊಂಡಿತು. ಇಲ್ಲಿ ಮತಪೆಟ್ಟಿಗೆಯೊಳಗೆ ಮತಚೀಟಿ ಪ್ರವೇಶಿಸುವಲ್ಲಿ ಏನೋ ತೊಡಕುಂಟಾಗಿತ್ತು. ಬಳಿಕ ಅದನ್ನು ಸರಿಪಡಿಸಲು ಅರ್ಧಗಂಟೆ ತಗಲಿತು.

ಹೆಜಮಾಡಿ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ 80 ವರ್ಷದ ಹಿರಿಯ ಮಹಿಳೆ ವನಜಾಕ್ಷಿ ಎಂಬವರು ವ್ಹೀಲ್ ಚೆಯರ್‌ನಲ್ಲಿ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News