ಕಲ್ಮಡ್ಕ: ಅತ್ಯಾಚಾರ ಆರೋಪದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪೊಲೀಸ್ ವಶಕ್ಕೆ
Update: 2020-12-27 11:23 IST
ಸುಳ್ಯ, ಡಿ.27: ಕಲ್ಮಡ್ಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೋರ್ವನನ್ನು ತನ್ನ ಸೋದರ ಸಂಬಂಧಿಯಾದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಆರೋಪದಲ್ಲಿ ಬೆಳ್ಳಾರೆ ಪೊಲೀಸರು ಚುನಾವಣೆಯ ಹಿಂದಿನ ದಿನವಾದ ಶನಿವಾರ ವಶಕ್ಕೆ ಪಡೆದಿದ್ದಾರೆ.
ಕಲ್ಮಡ್ಕ ಗ್ರಾಮದ ವಾರ್ಡ್–1ರಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಕ್ರಪ್ಪ ಯಾನೆ ನಾರಾಯಣ ಪುಚ್ಚಮ ಎಂಬವರು ಪೊಲೀಸರ ವಶವಾಗಿರುವ ವ್ಯಕ್ತಿ.
ಆರೋಪಿಯು ಅಪ್ರಾಪ್ತ ವಯಸ್ಸಿನ ತನ್ನ ಚಿಕ್ಕಪ್ಪನ ಮಗಳನ್ನು ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆಯ ಮನೆಯವರು ಪೊಲೀಸ್ ದೂರು ನೀಡಿದ್ದರು, ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಾರೆ ಪೊಲೀಸರು ಡಿ.26ರಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧನ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಾಗಿದೆ ಎಂದು ಎಸ್ಸೈ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.